ನಾಳೆ ಗ್ರಾಪಂ ಒಕ್ಕೂಟ ಸಭೆ
Update: 2016-01-10 00:25 IST
ಉಡುಪಿ, ಜ.9: ಉಡುಪಿ ತಾಲೂಕು ಗ್ರಾಪಂಗಳ ಚುನಾಯಿತ ಪ್ರತಿನಿಧಿಗಳ ಸಭೆಯನ್ನು ಜ.11ರಂದು ಬೆಳಗ್ಗೆ 10:30ಕ್ಕೆ ಉಡುಪಿಯ ಕಿದಿಯೂರು ಹೊಟೇಲ್ ಸಭಾಂಗಣದಲ್ಲಿ ಕರೆಯಲಾಗಿದೆ.
ಸಭೆಯಲ್ಲಿ ಗ್ರಾಪಂಗಳ ಸ್ಥಳೀಯ ಸಮಸ್ಯೆಗಳು, ಪಂಚಾಯತ್ ಸಬಲೀಕರಣ, ಕುಡಿಯುವ ನೀರಿನ ಯೋಜನೆಯ ತ್ವರಿತ ಅನುಷ್ಠಾನ, ವಿದ್ಯುತ್ ಬಿಲ್ ಮನ್ನಾ ಮೊದಲಾದವುಗಳ ಬಗ್ಗೆ ಚರ್ಚಿಸಿ ನಿರ್ಣಯ ಹಾಗೂ ತಾಲೂಕು ಮಟ್ಟದಲ್ಲಿ ಪಂಚಾಯತ್ ಪ್ರತಿನಿಧಿಗಳನ್ನು ಸಂಘಟಿಸಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಒಕ್ಕೂಟದ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಮೋಹನ ಪಾಂಡೇಶ್ವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.