×
Ad

ಡಾಟಾ ಎಂಟ್ರಿ ಉಚಿತ ತರಬೇತಿಗೆ ಅರ್ಜಿ ಆಹ್ವಾನ

Update: 2016-01-10 00:28 IST

ಉಡುಪಿ: ಕೇಂದ್ರ ಪುರಸ್ಕೃತ ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ವಿದ್ಯಾನಿಕೇತನ ಕಾಪು, ಎಂಐಟಿ ಕುಂದಾಪುರ ಹಾಗೂ ನಿಟ್ಟೆ ತಾಂತ್ರಿಕ ವಿದ್ಯಾಲಯಗಳಲ್ಲಿ ಡಾಟಾ ಎಂಟ್ರಿ ಆಪರೇಟರ್ ಹಾಗೂ ಹಾಸ್ಪಿಟಾಲಿಟಿ ಬಗ್ಗೆ 3 ತಿಂಗಳ ಉಚಿತ ತರಬೇತಿ ನೀಡಲಾಗುವುದು. ಬಳಿಕ ಯೋಜನಾ ಅನುಷ್ಠಾನ ಸಂಸ್ಥೆಯ ಮೂಲಕ ಉದ್ಯೋಗ ಒದಗಿಸಲು ಅವಕಾಶ ಇದ್ದು, ಇದಕ್ಕಾಗಿ 18ರಿಂದ 35ವರ್ಷದೊಳಗಿನ ಎಸ್ಸೆಸೆಲ್ಸಿ ಅಥವಾ ಪಿಯುಸಿ ಪಾಸಾಗಿರುವ ಬಿಪಿಎಲ್ ಕುಟುಂಬದ ಅಭ್ಯರ್ಥಿಗಳು ಸ್ಥಳೀಯ ಗ್ರಾಪಂ ಅಭಿವೃದ್ಧಿ ಅಧಿಕಾರಿಯವರನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸುವಂತೆ ಅಥವಾ ಲಕ್ಷ್ಮೀಶ್ ಭಟ್ (ಮೊ.ಸಂ: 9343137791) ಇವರನ್ನು ಸಂಪರ್ಕಿಸುವಂತೆ ಜಿಪಂ ಸಿಇಒ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News