ಇಂದು ಪುರಸ್ಕಾರ ಕಾರ್ಯಕ್ರಮ
Update: 2016-01-10 00:30 IST
ಕಾಸರಗೋಡು, ಜ.9: ಗಾನ ಗಂಧರ್ವ ಕೆ.ಜೆ.ಏಸುದಾಸ್‌ರ 76ನೆ ಹುಟ್ಟುಹಬ್ಬದಂಗವಾಗಿ ಜ.10ರಂದು ಕೊಲ್ಲೂರು ಮೂಕಾಂಬಿಕ ದೇವಸ್ಥಾನದಲ್ಲಿ ಶ್ರೀ ಮೂಕಾಂಬಿಕಾ ಸಂಗೀತಾರಾಧನೆ ಸಮಿತಿ ವತಿಯಿಂದ ಸಂಗೀತಾರಾಧನೆ ಮತ್ತು ಕವಿ ಹಾಗೂ ಸಂಗೀತ ನಿರ್ದೇಶಕ ಕೈದಪ್ರ ದಾಮೋದರನ್ ನಂಬೂದಿರಿಗೆ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ ಎಂದು ಸಂಗೀತರತ್ನ ರಾಮಚಂದ್ರನ್ ತಿಳಿಸಿದ್ದಾರೆ.