ವಾರಾಹಿ ಯೋಜನೆ: ಬೇಸಿಗೆ ಹಂಗಾಮಿಗೆ ಇಂದು ನೀರು ಹರಿಸುವ ಕಾರ್ಯಕ್ರಮ
Update: 2016-01-10 00:30 IST
ಉಡುಪಿ, ಜ.9: ವಾರಾಹಿ ಯೋಜನೆಯಲ್ಲಿ 2016ರ ಬೇಸಿಗೆ ಹಂಗಾಮಿಗೆ ನೀರು ಹರಿಸುವ ಕಾರ್ಯಕ್ರಮ ಜ.10ರಂದು ಅಪರಾಹ್ನ 3ಕ್ಕೆ ಕುಂದಾಪುರ ತಾಲೂಕು ಕುಳ್ಳಂಜೆ ಗ್ರಾಮದ ಭರತ್ಕಲ್‌ನ ವಾರಾಹಿ ಎಡದಂಡೆ ಕಾಲುವೆಯ ನಂ.1 ವಿತರಣಾ ಕಾಲುವೆಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟಿಸುವರು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.