ಇಂದು ಚಿಣ್ಣರ ಕ್ರೀಡಾಕೂಟ
Update: 2016-01-10 00:34 IST
ಉಡುಪಿ: ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್‌ನ ಆಶ್ರಯದಲ್ಲಿ ಚಿಣ್ಣರ ಕ್ರೀಡಾಕೂಟ (ಕಿಡ್ಸ್ ಸ್ಪೋರ್ಟ್ಸ್ ಮೀಟ್) ಜ.10ರಂದು ಅಜ್ಜರಕಾಡಿನಲ್ಲಿರುವ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ದಿನೇಶ್ ಪುತ್ರನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
8 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಮನೋರಂಜನೆ ಆಟಗಳೊಂದಿಗೆ ವೈಯಕ್ತಿಕ ಸ್ಪರ್ಧೆಗಳು ನಡೆಯಲಿವೆ. ಪ್ರತಿ ವಿಭಾಗದಲ್ಲೂ ಬಾಲಕ-ಬಾಲಕಿಯರಿಗೆ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ, ತಂಡ ಪ್ರಶಸ್ತಿ ಹಾಗೂ ಕ್ರೀಡಾಕೂಟದಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ತಂಡಕ್ಕೆ ಸಮಗ್ರ ಪ್ರಶಸ್ತಿ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಜಯರಾಮ ಸುವರ್ಣ, ಚಂದ್ರಶೇಖರ ಹೆಗ್ಡೆ, ಸೀತಾನದಿ ಸತೀಶ್ ಶೆಟ್ಟಿ, ಗ್ರೆಗರಿ ಡಿಸಿಲ್ವ ಉಪಸ್ಥಿತರಿದ್ದರು.