×
Ad

ಇಂದಿನಿಂದ ಲಯನ್ಸ್ ಶತಮಾನೋತ್ಸವ ಆಚರಣೆ

Update: 2016-01-10 00:34 IST

ಮಂಗಳೂರು, ಜ.9: ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ ದ.ಕ., ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಜಿಲ್ಲೆ 317-ಡಿಯ ಆಶ್ರಯದಲ್ಲಿ ಜ. 10ರಿಂದ 17ರ ತನಕ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಕವಿತಾ ಶಾಸಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

2016-17ನೆ ಸಾಲಿನಲ್ಲಿ ಲಯನ್ಸ್ ಸಂಸ್ಥೆಯು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಮಾರಂಭದ ಆರಂಭೋತ್ಸವವನ್ನು ‘ಸ್ಮೃತಿ’ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತಿದೆ. ಜ. 10ರಂದು ಎಕ್ಕೂರಿನ ಫಿಶರೀಸ್ ಕಾಲೇಜಿನಲ್ಲಿ ‘ಸಾಮರಸ್ಯ’ ಸರ್ವಧರ್ಮ ಸಮ್ಮಿಲನವನ್ನು ಆಯೋಜಿಸಲಾಗಿದೆ. ಲಯನ್ಸ್ ಶತಮಾನೋತ್ಸವದ ಸಾಧನೆಗಳ ಸಂದೇಶ ಸಾರುವ ಲಯನ್ಸ್ ಸೇವಾರಥಕ್ಕೆ ಈ ವೇಳೆ ಚಾಲನೆ ದೊರೆಯಲಿದೆ. ಸೇವಾರಥವು ದ.ಕ., ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಸಂಚರಿಸಿ ಜ. 17ರಂದು ಮಂಗಳೂರಿಗೆ ಮರಳಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News