×
Ad

ಸಾಹಸ ತರಬೇತಿ ಶಿಬಿರ

Update: 2016-01-10 00:37 IST

ಉಡುಪಿ, ಜ.9: ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ 2015-16ನೆ ಸಾಲಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ 18ರಿಂದ 35 ವರ್ಷದೊಳಗಿನ ಯುವಕ/ಯುವತಿಯರಿಗಾಗಿ ಸಾಹಸ ಕ್ರೀಡಾ ತರಬೇತಿಗಳಾದ ಭೂಸಾಹಸ ಹಾಗೂ ಜಲಸಾಹಸ ತರಬೇತಿ ಶಿಬಿರಗಳನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ, ರಾಮನಗರ ಹಾಗೂ ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಸಾಗರದಲ್ಲಿ ಬೇಸಿಕ್ ಹಾಗೂ ಅಡ್ವಾನ್ಸ್ ತರಬೇತಿ ಶಿಬಿರಗಳನ್ನು ಜ.15ರಿಂದ ಮಾರ್ಚ್ 20ರವರೆಗೆ ಉಚಿತವಾಗಿ ಏರ್ಪಡಿಸಲಾಗಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಜ.10ರೊಳಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ, ಅಜ್ಜರಕಾಡು ಉಡುಪಿ (ದೂ.: 0820-2521324)ಯನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News