×
Ad

ಚಿತ್ರನಟಿ ಕಾವ್ಯಾ ಮಾಧವನ್ ರಿಂದ ಎಂಡೋಸಲ್ಫಾನ್ ಸಂತ್ರಸ್ಥರಿಗೆ ನೆರವು

Update: 2016-01-10 08:44 IST

ಕಾಸರಗೋಡು :  ಎಂಡೋಸಲ್ಫಾನ್  ಸಂತ್ರಸ್ಥರಿಗೆ  ಒಂದು ಲಕ್ಷ ರೂ . ನೆರವು ನೀಡುವ ಮೂಲಕ ಚಿತ್ರನಟಿ ಕಾವ್ಯಾ ಮಾಧವನ್   ಮಾನವೀಯತೆ  ಮರೆದಿದ್ದು , ಶನಿವಾರ ಕಾಸರಗೋಡಿಗೆ  ಆಗನಿಸಿದ ಕಾವ್ಯಾ ಮಾಧವನ್  ಜಿಲ್ಲಾಡಳಿತಕ್ಕೆ ಒಂದು ಲಕ್ಷ ರೂ . ಹಸ್ತಾಂತರಿಸಿದರು .

ಪತ್ರಿಕಾ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ  ಜಿಲ್ಲಾಧಿಕಾರಿ ಪಿ, ಎಸ್ ಮುಹಮ್ಮದ್ ಸಗೀರ್ ರವರಿಗೆ ಒಂದು ಲಕ್ಷ ರೂ . ನ ಚೆಕ್ಕನ್ನು  ಹಸ್ತಾಂತರಿಸಿದರು .

ಈ  ಸಂದರ್ಭದಲ್ಲಿ  ಮಾತನಾಡಿದ ಅವರು , ಎಂಡೋಸಲ್ಫಾನ್ ಸಂತ್ರಸ್ಥರಿಗೆ  ನೆರವಾಗಬೇಕಾದ ಜವಾಬ್ದಾರಿ  ನಮ್ಮದಾಗಿದೆ.    ಇಂತಹ  ಘಟನೆಗಳು ಎಲ್ಲಿಯೂ ತಲೆ ಎತ್ತದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ   ಎಲ್ಲರದ್ದಾಗಿದೆ  ಎಂದು ಅಭಿಪ್ರಾಯಪಟ್ಟರು.
ನೀಲೇಶ್ವರ  ನಗರಸಭಾ ಅಧ್ಯಕ್ಷ  ಕೆ. ಪಿ  ಜಯರಾಜನ್  ಅಧ್ಯಕ್ಷತೆ ವಹಿಸಿದ್ದರು .
 

ಹೆಚ್ಚುವರಿ ದಂಡಾಧಿಕಾರಿ  ಎಚ್ . ದಿನೇಶನ್,  ಉಪ ಜಿಲಾಧಿಕಾರಿ  ಡಾ . ಪಿ. ಜಯಶ್ರೀ , ಕೆ. ಕುನ್ಚ೦ಬು  ನಾಯರ್ , ಸಣ್ಣಿ ಜೋಸೆಫ್ , ಕಾವ್ಯಾ ಮಾಧವನ್ ರವರ ತಂದೆ  ಮಾಧವ , ತಾಯಿ  ಶ್ಯಾಮಲಾ ಉಪಸ್ಥಿತರಿದ್ದರು
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News