ಕಾಸರಗೋಡು : ಹೊಳೆ ಮರಳು ಮಾಫಿಯಾ ವಿರುದ್ದ ಕಾರ್ಯಾಚರಣೆ
Update: 2016-01-10 13:07 IST
ಕಾಸರಗೋಡು : ಜಿಲ್ಲೆಯಲ್ಲಿ ಹೊಳೆ ಮರಳು ಮಾಫಿಯಾ ವಿರುದ್ದ ಪೊಲೀಸರ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.
ಪೊಲೀಸ್ ಮತ್ತು ಕಂದಾಯ ಇಲಾಖಾಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು , ಚೇರೂರು, ಪೆರುಂಬಳ, ಪಾಣಲ೦, ಚೆಂಗಳ ಮೊದಲಾದೆಡೆಗಳಲ್ಲಿ ಅಕ್ರಮ ಮರಳು ಅಡ್ಡೆಗಳನ್ನು ಜೆ ಸಿ ಬಿ ಯಂತ್ರದ ಮೂಲಕ ರವಿವಾರ ನಾಶಗೊಳಿಸಲಾಗಿದೆ.
ತುರ್ತಿ ಎಂಬಲ್ಲಿ ಹೊಳೆ ಬದಿ ರಾಶಿ ಹಾಕಲಾಗಿದ್ದ 20 ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೆರುಂಬಳ ತೀರದಿಂದ ಒಂದು ಟಿಪ್ಪರ್ ಮತ್ತು ಮರಳು ಲಾರಿಗಳಿಗೆ ಬೆಂಗಾವಲಾಗಿ ಚಲಾಯಿಸಲಾಗುತ್ತಿದ್ದ ಒಂದು ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ .
ಟಿಪ್ಪರ್ ಚಾಲಕ ಅಶ್ರಫ್ ಎಂಬಾತನ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯ ಇತರ ಕಡೆಗಳಿಗೂ ದಾಳಿ ನಡೆಸಲು ಅಧಿಕಾರಿ ಗಳು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.