ಪೊಲೀಸರ ಆಟೋಟ ಸ್ಪರ್ಧೆ
Update: 2016-01-11 00:24 IST
ಮಂಗಳೂರು, ಜ.10: ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ದೈಹಿಕ ಕ್ಷಮತೆ ಮತ್ತು ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಪೊಲೀಸ್ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗೆ ಪ್ರತಿ ವಾರ ಕವಾಯತನ್ನು ನಡೆಸಲಾಗುತ್ತಿದೆ. ಆದರೆ, ಇದೇ ಮೊದಲ ಬಾರಿಗೆ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಶರಣಪ್ಪ ಎಸ್.ಡಿ. ಅಧಿಕಾರಿ, ಸಿಬ್ಬಂದಿಗೆ ವಾರದ ಕವಾಯತಿನ ಬದಲಾಗಿ ನೂತನ ರೀತಿಯಲ್ಲಿ ಕಡಲ ಕಿನಾರೆಯಲ್ಲಿ ನಡಿಗೆ ಮತ್ತು ಓಟ ಕಾರ್ಯಕ್ರಮವನ್ನು ಪಣಂಬೂರಿನಲ್ಲಿ ಏರ್ಪಡಿಸಿದ್ದರು