×
Ad

ಮಾರಿಪಳ್ಳ: ರಸ್ತೆ ಉದ್ಘಾಟೆ

Update: 2016-01-11 00:24 IST

ವಿಟ್ಲ, ಜ.10: ಪುದು ಗ್ರಾಮದ ಮಾರಿಪಳ್ಳದಲ್ಲಿ 5 ಲಕ್ಷ ರೂ.ವೆಚ್ಚದಲ್ಲಿ ಕಾಂಕ್ರಿಟೀಕರಣಗೊಂಡ 1ನೆ ಅಡ್ಡರಸ್ತೆಯನ್ನು ಸಚಿವ ಯು.ಟಿ. ಖಾದರ್ ಉದ್ಘಾಟಿಸಿದರು.
ಈ ಸಂದರ್ಭ ಜಿಪಂ ಮಾಜಿ ಸದಸ್ಯ ಉಮರ್ ಫಾರೂಕ್, ತಾಪಂ ಸದಸ್ಯ ಆಸೀಫ್ ಇಕ್ಬಾಲ್, ಪುದು ಗ್ರಾಪಂ ಅಧ್ಯಕ್ಷೆ ಆತೀಕಾ, ಉಪಾಧ್ಯಕ್ಷ ಹಾಶೀರ್, ಸದಸ್ಯರಾದ ರಮ್ಲಾನ್, ಝಾಹೀರ್, ಫೈಝಲ್, ಖಾದರ್ ಪಾವೂರು, ಲಕ್ಷ್ಮೀ, ವನಿತಾ, ಹೇಮಲತಾ, ಜಯಂತಿ ನಳಿನಾಕ್ಷಿ, ಮನೋರಮಾ, ಹಿಲ್ಡಾ, ಪ್ರಮುಖರಾದ ಮುಹಮ್ಮದ್ ಬಾವಾ, ಯೂಸುಫ್ ಅಲಂಕಾರ್, ಇಬ್ರಾಹೀಂ ಕುಂಪಣಮಜಲು, ಬಾವಾ ಮಾರಿಪಳ್ಳ, ಅಬ್ಬು ಮಾರಿಪಳ್ಳ, ಎಂ.ಕೆ. ಮುಹಮ್ಮದ್, ಭಾಸ್ಕರ ರೈ ಸುಜೀರು, ಇಕ್ಬಾಲ್, ರಫೀಕ್ ಪೇರಿಮಾರ್, ಹಕೀಂ, ಅಹಮ್ಮದ್ ಪೇರಿಮಾರ್, ಸಲಾಂ ಮಲ್ಲಿ, ನಝೀರ್, ಬದ್ರು, ಎಂ.ಕೆ. ಮುಹಮ್ಮದ್, ಅಬೂಬಕರ್ ಫರಂಗಿಪೇಟೆ, ಮಜೀದ್, ಸದಾಶಿವ ಕುಮ್ಡೇಲು ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಯೋಜನಾ ಸಮಿತಿ ಸಭೆ
ಉಡುಪಿ, ಜ.10: ಗ್ರಾಪಂ, ತಾಪಂ, ಜಿಪಂ ಹಾಗೂ ಎಲ್ಲಾ ಸ್ಥಳೀಯ ನಗರ ಸಂಸ್ಥೆಗಳು ತಮ್ಮ ಕ್ರಿಯಾ ಯೋಜನೆಯನ್ನು ತಯಾರಿಸುವಾಗ ಕನಿಷ್ಠ ಮುಂದಿನ 5 ವರ್ಷಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು ಎಂದು ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಿನ ಜಿಪಂ, ತಾಪಂ, ಗ್ರಾಪಂ, ಪುರಸಭೆ ಮತ್ತು ಪಟ್ಟಣ ಪಂಚಾಯತ್‌ಗಳ ಕ್ರಿಯಾ ಯೋಜನೆಗಳ ಒಟ್ಟು ಕ್ರೋಢೀಕರಣದಿಂದ ಇಡೀ ಜಿಲ್ಲೆಯ ಅಭಿವೃದ್ಧಿಯಾಗಬೇಕು. ಆದ್ದರಿಂದ ಪ್ರಾದೇಶಿಕ ನೀರಿನ ಹಂಚಿಕೆ, ಸ್ಥಳೀಯ ಜನತೆಯ ಅವಶ್ಯಕತೆಗಳು, ಪರಿಸರ ಸಂರಕ್ಷಣೆ, ಲಭ್ಯವಿರುವ ಹಣಕಾಸು ಸಂಪನ್ಮೂಲ ಮತ್ತು ಇತರೆ ಸಂಪನ್ಮೂಲಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಯೋಜನೆಗಳನ್ನು ರೂಪಿಸಬೇಕು ಎಂದು ಪ್ರಿಯಾಂಕಾ ಮೇರಿ ನುಡಿದರು.ಜಿಪಿಎಸ್ ಆಧಾರದಲ್ಲಿ ನಕ್ಷೆಗಳನ್ನು ತಯಾರಿಸುವುದರಿಂದ ಯೋಜನೆಗಳ ತಯಾರಿಗೆ ಅನುಕೂಲವಾಗಲಿದೆ. ಈ ಕುರಿತು ಜಿಲ್ಲೆಯ 7 ಗ್ರಾಪಂಗಳಲ್ಲಿ ಪೈಲಟ್‌ಯೋಜನೆಯಲ್ಲಿ ನಕ್ಷೆ ಅಂತಿಮಗೊಳಿಸಲಾಗಿದ್ದು, ಉಳಿದ ಗ್ರಾಪಂಗಳಲ್ಲಿ ಹಂತ ಹಂತವಾಗಿ ಮಾಡಲಾಗುವುದು. ಗ್ರಾಪಂ ಮಟ್ಟದಲ್ಲಿ ಘನತ್ಯಾಜ್ಯ ವಿಲೇವಾರಿಗಾಗಿ ಸ್ವಚ್ಛ ಭಾರತ್ ಯೋಜನೆಯಡಿ ಅನುದಾನಕ್ಕಾಗಿ ಜಿಲ್ಲೆಯಿಂದ 28 ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಸಭೆಯಲ್ಲಿ ಜಿಪಂ ಅಧ್ಯಕ್ಷೆ ಸವಿತಾ ಶಿವಾನಂದ ಕೋಟ್ಯಾನ್, ಉಪಾಧ್ಯಕ್ಷ ಪ್ರಕಾಶ್ ಮೆಂಡನ್, ನಗರಸಭೆಅಧ್ಯಕ್ಷ ಪಿ. ಯುವರಾಜ್, ಯೋಜನಾ ಸಮಿತಿ ವಿಶೇಷಆಹ್ವಾನಿತ ಸದಸ್ಯರಾದ ಎನ್.ಎಸ್.ಶೆಟ್ಟಿ, ಗುಜ್ಜಾಡಿ ಪ್ರಭಾಕರ್ ನಾಯಕ್, ಜಿಪಂ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News