ಕಿಂಡಿ ಅಣೆಕಟ್ಟುಗಳಿಗೆ 3.75 ಕೋಟಿ ರೂ. ಮಂಜೂರು
Update: 2016-01-11 00:25 IST
ಉಡುಪಿ, ಜ.10: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ 3.75 ಕೋ.ರೂ.ಅನುದಾನ ಮಂಜೂರಾಗಿದೆ. ನಾಲ್ಕೂರು ಕಜ್ಕೆಕೊಳ, ಕುಮ್ರಿ ಮತ್ತು ಕಣ್ವನಬೆಟ್ಟುವಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ 30 ಲಕ್ಷ ರೂ., ಚಾಂತಾರು ಗ್ರಾಮದ ಅಂಗಡಿಬೆಟ್ಟು-30 ಲಕ್ಷ ರೂ., ಕರ್ಜೆ ಮೈರ್ಮಾಡಿ ಮತ್ತು ಕೆಂಜೂರು ಪೂಜಾರಿಬೆಟ್ಟು-50 ಲಕ್ಷ ರೂ., ಹೊಸೂರು ಸರಂಬಳ್ಳಿ-150 ಲಕ್ಷ ರೂ., ಪರ್ಕಳ ಗ್ರಾಮದ ಮಾಣಿಬೆಟ್ಟುವಿನಲ್ಲಿ 25 ಲಕ್ಷ ರೂ., ಕೊಕ್ಕರ್ಣೆ ಗ್ರಾಮದ ಒಳಬೈಲು ಕುಡುಬಿಕೇರಿಯಲ್ಲಿ 90 ಲಕ್ಷ ರೂ. ಮಂಜೂರಾಗಿದೆ ಎಂದು ಶಾಸಕ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.