ಎಸ್ಕೆಎಸ್ಸೆಸ್ಸೆಫ್‌ನಿಂದ ಪೋಸ್ಟರ್ ಬಿಡುಗಡೆ
Update: 2016-01-11 00:26 IST
ಮಂಗಳೂರು, ಜ.10: ದಕ್ಷಿಣ ಕನ್ನಡ ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ನೇತೃತ್ವದಲ್ಲಿ ಜ.17ರಂದು ಮಂಗಳೂರು ಪುರಭವನದಲ್ಲಿ ನಡೆಯಲಿರುವ ‘ಪ್ರವಾದಿ (ಸ.ಅ) ಸಹಿಷ್ಣುತೆಯ ಸ್ನೇಹದೂತ’ ಕಾರ್ಯಕ್ರಮದ ಪೋಸ್ಟರ್‌ಗಳನ್ನು ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಇಸ್ಹಾಕ್ ಫೈಝಿ ಕೊಲ್ನಾಡು ಮಂಗಳೂರಿನ ಬಂದರ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು.
ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಖಾಸಿಂ ದಾರಿಮಿ, ಇಸ್ಮಾಯೀಲ್ ಯಮಾನಿ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಶರೀಫ್ ಮೂಸಾ, ಅಬ್ದುಲ್ ಜಲೀಲ್ ಬದ್ರಿಯಾ, ಶರೀಫ್ ಕಡಬ, ರಿಯಾಝ್ ಫೈಝಿ ಮೊದಲಾದವರು ಉಪಸ್ಥಿತರಿದ್ದರು.