×
Ad

ಗಂಗೊಳ್ಳಿ ತೌಹೀದ್ ಶಾಲೆಯಲ್ಲಿ ದೀನಿಯಾತ್ ದಿನಾಚರಣೆ

Update: 2016-01-11 00:29 IST

ಗಂಗೊಳ್ಳಿ, ಜ.10: ಇಲ್ಲಿನ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದೀನಿಯಾತ್ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು. ತೌಹೀದ್ ಆಡಳಿತ ಮಂಡಳಿಯ ಅಧ್ಯಕ್ಷ ಅಬ್ದುಲ್ ಖಾಲಿಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ರಾಯ್‌ಬರೇಲಿಯಾದ ತಸ್ಫೀರ್-ವಾ-ಹದೀಸ್, ಮದ್ರಸ ಝೀಯಾಉಲ್ ಉಲೂಮ್‌ನ ವಿದ್ವಾಂಸ ಮೌಲಾನಾ ಅಬ್ದುಲ್ ಸುಬಾನ್ ನದ್ವಿ ಮದನಿ ನಾಖುದಾ ಭಾಗವಹಿಸಿದ್ದರು. ತೌಹೀದ್ ಆಡಳಿತ ಮಂಡಳಿಯ ಸದಸ್ಯ ಅಬ್ದುಲ್ ಹಮೀದ್ ಶೇಕ್‌ಜೀ ಹಾಗೂ ಇಮ್ತಿಯಾಜ್ ಅಹ್ಮದ್ ಖಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಿರಾಅತ್, ಹಮ್ದ್, ನಾಅತ್, ಆಝಾನ್ ಇತ್ಯಾದಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಅಬ್ದುಲ್ ಖಾಲಿಕ್ ಅಧ್ಯಕೀಯ ಭಾಷಣಗೈದರು. ವಿದ್ಯಾರ್ಥಿ ಫೈಝುಲ್ ಸ್ವಾಗತಿಸಿದರು. ಜಾಫರ್ ಸಾದಿಕ್ ಹಾಗೂ ಅಫ್ತಾಬ್ ಹಮ್ದ್ ಮತ್ತು ನಾಅತ್ ಹಾಡಿದರು. ರುಹೈಲ್ ಎಂ.ಎಚ್., ಸುಹೈಲ್ ಖಾನ್ ಮತ್ತು ಅಯಾನ್ ಅಸದಿ ಅತಿಥಿಗಳ ಪರಿಚಯ ನೀಡಿದರು. ಮುಹಮ್ಮದ್ ಝೈನ್ , ಮುನ್ತಝರ್, ಹಸೈನಾರ್ ಮತ್ತು ರುಹೈಲ್ ಎಂ.ಎಚ್, ವಿಜೇತರ ಪಟ್ಟಿಯನ್ನು ಓದಿದರು. ಫರಾಝ್ ವಂದಿಸಿದರು. ಇಮ್ದಾದ್ ಮತ್ತು ಅನ್ಫಾಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News