ಬೆಳ್ತಂಗಡಿ: ರೈತರಿಗೆ ಕೃಷಿ ಸಲಕರಣೆಗಳ ಹಸ್ತಾಂತರ
ಬೆಳ್ತಂಗಡಿ, ಜ.10: ಸರಕಾರಿ ಯೋಜನೆಗಳು ರೈತರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ದೂರುಗಳಿವೆ. ಅದನ್ನು ಸರಿಪಡಿಸಲು ಪ್ರಯತ್ನಿಸು ವುದಾಗಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಕೃಷಿ ಇಲಾಖೆಯ ವತಿಯಿಂದ ಬೆಳ್ತಂಗಡಿ ಯಲ್ಲಿ ರೈತರಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿದರು. ಈ ಸಂದರ್ಭ 5 ಪವರ್ ಟಿಲ್ಲರ್, 1 ಮಿನಿ ಟ್ರಾಕ್ಟರ್ ಹಾಗೂ ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನೆಯಡಿ ನೆರಿಯ, ಪುದುವೆಟ್ಟು, ಕಳೆಂಜ, ನಿಡ್ಲೆ ಗ್ರಾಪಂನ 125 ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿದರು. ಅಲ್ಲದೆ ಜಿಲ್ಲಾ ಮಟ್ಟದಲ್ಲಿ ಕೃಷಿ ಪ್ರಶಸ್ತಿ ವಿಜೇತ ಕೃಷಿಕ ತಣ್ಣೀರುಪಂತ ನಿವಾಸಿ ಬಾಲಕೃಷ್ಣ ಶೆಟ್ಟಿ, ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಶ್ಯಾಮಣ್ಣ ನಾಯಕ್ ಓಡಿಲ್ನಾಳ, ದ್ವಿತೀಯ ಸ್ಥಾನ ಪಡೆದ ಚೆನ್ನಪ್ಪಪೂಜಾರಿಮಿತ್ತಬಾಗಿಲು, ತೃತೀಯ ಸ್ಥಾನ ಪಡೆದ ಮುನಿರಾಜ ಹೆಗ್ಡೆ ನಾರಾವಿಯವರನ್ನು ಶಾಸಕರು ಪ್ರಶಸ್ತಿಪತ್ರ ಹಾಗೂ ನಗದು ಬಹುಮಾನ ನೀಡಿ ಸನ್ಮಾನಿ ಸಿದ
ರು. ತಾಪಂ ಅಧ್ಯಕ್ಷೆ ಜಯಂತಿ ಪಾಲೇದು, ಕಳೆಂಜ ಗ್ರಾಪಂ ಅಧ್ಯಕ್ಷೆ ಶಾರದಾ, ಪುದುವೆಟ್ಟು ಗ್ರಾಪಂ ಅಧ್ಯಕ್ಷೆ ನೀಲಮ್ಮ, ನೆರಿಯ ಗ್ರಾಪಂ ಅಧ್ಯಕ್ಷೆ ಮುಹಮ್ಮದ್, ನಿಡ್ಲೆ ಗ್ರಾಪಂ ಅಧ್ಯಕ್ಷ ಶುಭಾ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.