ಬಿಜೆಪಿ ಸತ್ಯಶೋಧನಾ ತಂಡ ಮಾಲ್ಡಾದಲ್ಲಿ ಬಂಧನ
Update: 2016-01-11 09:04 IST
ಮಾಲ್ಡಾ: ಕಳೆದ ವಾರ ನಡೆದ ಹಿಂಸಾಚಾರದ ಬಗ್ಗೆ ಮಾಹಿತಿ ಪಡೆಯಲು ಆಗಮಿಸಿರುವ ಬಿಜೆಪಿ ಸತ್ಯಶೋಧನಾ ತಂಡವನ್ನು ಮಾಲ್ಡಾ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ. ಬಲಪಂಥೀಯ ನಾಯಕರೊಬ್ಬರು ಧರ್ಮವಿರೋಧಿ ಹೇಳಿಕೆ ನೀಡಿದ ಬಳಿಕ ಕಳೆದ ವಾರ ಮಾಲ್ಡಾದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.
ಘಟನೆಯ ಬಗ್ಗೆ ಮಾಹಿತಿ ಪಡೆಯಲು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೆಂದರ್ ಯಾದವ್ ನೇತೃತ್ವದಲ್ಲಿ ಸಮಿತಿ ಆಗಮಿಸಿತ್ತು. ಪಕ್ಷದ ಸಂಸದ ಎಸ್.ಎಸ್.ಅಹ್ಲುವಾಲಿಯಾ ಹಾಗೂ ನಿವೃತ್ತ ಡಿಜಿಪಿ ಬಿ.ಡಿ.ರಾಮ್ ತಂಡದಲ್ಲಿದ್ದಾರೆ. ಘಟನೆಯ ಬಗ್ಗೆ ಪಕ್ಷಾಧ್ಯಕ್ಷ ಅಮಿತ್ ಷಾ ಅವರಿಗೆ ಸಮಿತಿ ವರದಿ ಸಲ್ಲಿಸಲಿದೆ.