ಬೆಳ್ತಂಗಡಿ: ಕಕ್ಕಿಂಜೆ ಸಮೀಪ ಜೋಡಿ ಕೊಲೆ
Update: 2016-01-11 10:47 IST
ಬೆಳ್ತಂಗಡಿ: ಕಕ್ಕಿಂಜೆ ಸರಕಾರಿ ಶಾಲೆಯ ಸಮೀಪದ ಮನೆಯೊಂದರಲ್ಲಿದ್ದ ವೃದ್ಧ ದಂಪತಿಯನ್ನು ದರೋಡೆಗಾಗಿ ಕೊಲೆಗೈಲಾಗಿದೆ ಎಂದು ತಿಳಿದುಬಂದಿದೆ.
ಮೃತರನ್ನು ವರ್ಗೀಸ್ (94) ಮತ್ತು ಅವರ ಪತ್ನಿ ಏಲಿಕುಟ್ಟಿ (85) ಎಂದು ಗುರುತಿಸಲಾಗಿದೆ. ಏಲಿಕುಟ್ಟಿ ಮೃತದೇಹ ಮನೆಯ ಒಳಗಿದ್ದರೆ ವರ್ಗೀಸ್ ರ ಮೃತದೇಹ ಮನೆಯಿಂದ ಸುಮಾರು 100 ಮೀ ದೂರದಲ್ಲಿ ಪತ್ತೆಯಾಗಿದೆ.
ದರೋಡೆಗಾಗಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.