×
Ad

ಅಫ್ಝಲ್‌ ಗುರು ಪುತ್ರನಿಗೆ 10ನೆ ಕ್ಲಾಸ್ ಪರೀಕ್ಷೆಯಲ್ಲಿ ಶೇ 95ಅಂಕ

Update: 2016-01-11 10:58 IST


ಶ್ರೀನಗರ, ಜ.11: ಘಾಲಿಬ್‌ ಗುರು ಈತ ಸಂಸತ್ ಭವನದ ದಾಳಿಯ ಆರೋಪದಲ್ಲಿ ಮೂರು ವರ್ಷಗಳ ಹಿಂದೆ ಗಲ್ಲಿಗೇರಿಸಲ್ಪಟ್ಟ ಮುಹಮ್ಮದ್ ಅಫ್ಝಲ್ ಗುರು ಪುತ್ರ.  ಪ್ರತಿಭಾವಂತ ವಿದ್ಯಾರ್ಥಿ 10ನೆ ಪರೀಕ್ಷೆಯಲ್ಲಿ ಶೇ 95ರಷ್ಟು ಅಂಕ ಗಳಿಸಿ ತೇರ್ಗಡೆಯಾಗಿದ್ಧಾನೆ.
ಜಮ್ಮು ಮತ್ತು ಕಾಶ್ಮೀರ ಶಿಕ್ಷಣ ಮಂಡಳಿ ನಡೆಸಿದ ಪರೀಕ್ಷೆಯಲ್ಲಿ ಘಾಲಿಬ್‌ 500ರಲ್ಲಿ 474ಅಂಕ ಗಳಿಸಿದ್ದಾನೆ. ಪರೀಕ್ಷೆಯ ಫಲಿತಾಂಶ ರವಿವಾರ ಪ್ರಕಟಗೊಂಡಿದ್ದು,  ಪುಲುವಾಮಾ ಜಿಲ್ಲೆಯ ಅವಂತಿಪುರ ನಿವಾಸಿ  ಘಾಲಿಬ್‌ ಐದು ವಿಷಯಗಳಲ್ಲೂ ಎ. 1ಗ್ರೇಡ್‌ ಪಡೆದಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News