ಶಾರ್ಟ್ ಸಕ್ಯೂಟ್ : ಮನೆಗೆ ಬೆಂಕಿ; ಅಪಾರ ನಷ್ಟ
ಹಳೆಯಂಗಡಿ : ಶಾರ್ಟ್ ಸಕ್ಯೂಟ್ ನಿಂದಾಗಿ ಮನೆ ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾದ ಘಟನೆ ಮುಲ್ಕಿ ಠಾಣಾ ವ್ಯಾಪ್ತಿಯ ಇಂದಿರಾನಗರ ಎಂಬಲ್ಲಿ ನಡೆಸಿದೆ. ದಿ.ಅಬ್ದುಲ್ ಕಾದರ್ ಹಾಗೂ ದಿ. ಮರಿಯಮ್ಮ ಎಂಬವರಿಗೆ ಸೇರಿದ ಮನೆಯಾಗಿದ್ದು, ಸೋಮವಾರ ಮಧ್ಯಾಹ್ನದ ವೇಳೆ ಮನೆಯ ಎಕ್ಟೆಂಷನ್ ಸ್ವಿಚ್ ಬೋರ್ಡ್ ನಲ್ಲಿ ಶಾರ್ಟ್ ಸಕ್ಯೂಟ್ ಸಂಭವಿಸಿದ ಕಾರಣ ಈ ದುರ್ಘಟನೆ ಸಂಭವಿಸಿತು ಎನ್ನಲಾಗಿದೆ.
ದಂಪತಿ ಮೃತರಾದ ಬಳಿಕ ಅವರ ಮಗ ದಾವುದ್ ಮನೆಯಲ್ಲಿರುತ್ತದ್ದ ಆದೆ, ಘಟನೆ ಸಂಭವಿಸುವಾಗ ಮನೆಯಲ್ಲಿರದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಅವಘಡದಿಂದ ಮನೆಯ ದಾಖಲೆ ಪತ್ರಗಳು, ಶಾಲೆಯ ದಾಖಲೆ ಪತ್ರಗಳು, ಪೀಟೋಪಕರಣಗಳು, ಬಟ್ಟೆ ಬರೆ, ಪಾತ್ರೆಗಳು ಸೇರಿದಂತೆ ಮನೆಯ ಒಳಗಿದ್ದ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಟಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿದ್ದಾರೆ.
ಬೆಂಕಿ ಹೊತ್ತಿಕೊಂಡ ವೇಳೆ ಸ್ಥಳೀಯರು ಅಗ್ನಿಶಾಮಕ ಕ್ಕೆ ಕರೆ ಮಾಡಿದ್ದರು. ಅದರೆ, ಇಂದಿರಾನಗರದಲ್ಲಿ ರೈಲು ಗೇಟ್ ಬಿದ್ದಿದ್ದ ಕಾರಣ ಸಕಾಲಕ್ಕೆ ಬರಲಾಗದ ಕಾರಣ ಬೆಂಕಿಯ ಕೆನ್ನಾಲಗೆ ಮನೆಯಲ್ಲಿನ ಸಂಪೂರ್ಣ ವಸ್ತುಗಳು ಬೆಂಕಿಗೆ ಆಹುತಿಯಾಯಿತು.ಎಂದು ತಿಳಿದು ಬಂದಿದೆ.
ಸ್ಥಳೀಯರ ಕಾರ್ಯಾಚರಣೆ:
ಸಕಾಲಕ್ಕೆ ಅಗ್ನಿಶಾಮಕ ವಾಹನ ಬರದ ಹಿನ್ನೆಲೆ ಸ್ಥಳೀಯ ಪೂಜಾ ಎರೇಂಜರ್ಸ್ ನ ನೀರಿನ ಟ್ಯಾಂಕರ್ ಮೂಲಕ ನೀರು ಹಾಯಿಸಿದ ಸ್ಥಳೀಯರು ಪಕ್ಕದ ಮನೆಗಳಿಗೆ ಹೊತ್ತಿಕೊಳ್ಳುವುದರಲ್ಲಿದ್ದ ಬೆಂಕಿಯನ್ನು ಸಂಬಾಲಿಸಿ ನಡೆಯ ಬಹುದಾಗಿದ್ದ ಹೆಚ್ಚಿನ ಅಪಾಯಗಳಿಂದ ಕಾಪಾಡಿದ್ದಾರೆ ಎಂದು ತಿಳಿದು ಬಂದಿದೆ.