×
Ad

ಪಠಾಣ್‌ಕೋಟ್‌ ದಾಳಿ ಪ್ರಕರಣ; ಪಾಕ್‌ನಲ್ಲಿ ಹಲವಡೆ ದಾಳಿ; ಶಂಕಿತರ ವಶಕ್ಕೆ

Update: 2016-01-11 17:10 IST


ಕರಾಚಿ, ಜ.11: ಪಠಾಣ್‌ಕೋಟ್‌ ಮೇಲೆ ಉಗ್ರರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಪೊಲೀಸರು ಇಂದು ಶಂಕಿತ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಪಠಾಣ್‌ಕೋಟೆ ವಾಯುನೆಲೆ ಮೇಲೆ ಉಗ್ರರು ದಾಳಿ ನಡೆಸಿದ ಪ್ರಕರಣದ ತನಿಖೆಗೆ  ಜಂಟಿ ತನಿಖಾ ತಂಡ(ಜೆಐಟಿ) ರಚನೆಗೆ ಪಾಕ್‌ಪ್ರಧಾನಿ ನವಾಝ್‌ ಶರೀಫ್‌ಆದೇಶ ನೀಡಿರುವ ಬೆನ್ನಲ್ಲೆ ಅಧಿಕಾರಿಗಳು ಗುಜ್ರನ್‌ವಾಲಾ, ಜೀಲಮ್‌, ಬಹಾವಲ್ಪುರ್‌ ಜಿಲ್ಲೆಗಳ ಹಲವಡೆ ದಾಳಿ ನಡೆಸಿ ಹಲವರನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ದಾಳಿ ಯಾವ ಉದ್ದೇಶಕ್ಕಾಗಿ ನಡೆದಿದೆ. ದಾಳಿಯಲ್ಲಿ ಯಾರು ಭಾಗಿಯಾಗಿದ್ಧಾರೆ ಮತ್ತು ಇದಕ್ಕೆ ಸಹಾಯ ಒದಗಿಸಿದವರು ಯಾರು ? ಎನ್ನುವ ವಿಚಾರದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಪಠಾಣ್‌ಕೋಟ್‌ ದಾಳಿಯ ಮೊದಲು ಉಗ್ರರು ಪಾಕ್‌ನ ಯಾರ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆಂದು ಅರಿಯಲು ದೂರವಾಣಿ ನಂಬ್ರಗಳನ್ನು ಕಲೆ ಹಾಕಿ ಪಾಕ್‌ಗೆ ಭಾರತ ನೀಡಿದೆ.

ಈಗಾಗಲೇ ಪಾಕ್‌ ಪ್ರಧಾನಿ ನವಾಝ್‌ ಶರೀಫ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಪ್ರಕರಣದ ಪಾರದರ್ಶಕ ತನಿಖೆ ನಡೆಸುವ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News