×
Ad

ಪಠಾಣ್‌ಕೋಟ್; ಉಗ್ರರ ಗುರುತು ಪತ್ತೆಗೆ ಇಂಟರ್‌ಪೋಲ್ ನೋಟಿಸ್

Update: 2016-01-11 18:45 IST


ಹೊಸದಿಲ್ಲಿ, ಜ.11: ಪ್ರಮುಖ ಬೆಳವಣಿಗೆಯೊಂದರಲ್ಲಿ ಪಠಾಣ್‌ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದ ಉಗ್ರರ ಗುರುತು ಹಿಡಿಯಲು ಇಂಟರ್‌ಪೋಲ್ ನೋಟಿಸ್ ಜಾರಿಗೊಳಿಸಿದೆ.
ಇದೇ ವೇಳೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು ವಾಯುನೆಲೆಯಲ್ಲಿ ಮೊಬೈಲ್ ಪೋನ್, ಎಕೆ-47 , ಬೈನಾಕ್ಯುಲರ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಎನ್‌ಐಎ ಪ್ರಕರಣಕ್ಕೆ ಸಂಬಂಧಿಸಿ ಮೂರು ಎಫ್‌ಐಆರ್ ದಾಖಲಿಸಿದೆ.ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಗುರುದಾಸಪುರ ಎಸ್‌ಪಿ ಸಲ್ವೀಂದರ್‌ ಸಿಂಗ್‌ ಇಂದು ತನಿಖೆಗೆ ಎನ್‌ಐಎ ಮುಂದೆ ಹಾಜರಾಗಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News