ಮುಗೇರಪಡ್ಪು: ಕಾಂಕ್ರಿಟೀಕೃತ ರಸ್ತೆ ಉದ್ಘಾಟನೆ
Update: 2016-01-11 23:35 IST
ಬಂಟ್ವಾಳ, ಜ.11: ತಾಲೂಕಿನ ನರಿಕೊಂಬು ಗ್ರಾಪಂ ವ್ಯಾಪ್ತಿಯ ಶಂಭೂರು ಗ್ರಾಮದ ಮುಗೇರಪಡ್ಪು ಎಂಬಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಾಲನಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು. ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ಬಾಸ್ ಅಲಿ, ನರಿಕೊಂಬು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉಮೇಶ ಬೋಳಂತೂರು, ಪ್ರಮುಖರಾದ ಎನ್. ಪ್ರಕಾಶ ಕಾರಂತ, ಆಲ್ಫೋನ್ಸ್ ಮಿನೇಜಸ್, ಆನಂದ ಸಾಲ್ಯಾನ್, ಆಲ್ಬರ್ಟ್ ಮಿನೇಜಸ್, ರವೀಂದ್ರ ಸಫಲ್ಯ, ಗೋಪಾಲ, ಭರತ್‌ರಾಜ್, ಮಧುಸೂಧನ, ದಿವಾಕರ ಏಲಬೆ, ರಾಜೇಶ್, ಹಿರಿಯ ಎಂಜಿನಿಯರ್ ನರೇಂದ್ರ ಬಾಬು, ಉಮೇಶ ಭಟ್, ಜಗದೀಶ ಮತ್ತಿತರರು ಉಪಸ್ಥಿತರಿದ್ದರು.