ಮದ್ರಸ ಮಕ್ಕಳ ಪ್ರತಿಭೋತ್ಸವ
ಹಳೆಯಂಗಡಿ, ಜ.11: ಹಿಮಾಯತುಲ್ ಇಸ್ಲಾಂ ಅಸೋಸಿಯೇಶನ್‌ನ ಸಂತೆಕಟ್ಟೆ ವತಿಯಿಂದ ಮೀಲಾದುನ್ನಬಿ ಪ್ರಯುಕ್ತ ಸಂತೆಕಟ್ಟೆ ಮದ್ರಸ ವಿದ್ಯಾರ್ಥಿಗಳ ಪ್ರತಿಭೋತ್ಸವ ಕಾರ್ಯಕ್ರಮ ಸಂತೆಕಟ್ಟೆ ಮಸೀದಿಯ ವಠಾರದಲ್ಲಿ ನಡೆಯಿತು.
ಹಳೆಯಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿಯ ಖತೀಬ್ ಕೆ.ಎಚ್. ಅಬ್ದುರ್ರಹ್ಮಾನ್ ಫೈಝಿಯ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅಲ್ಹಾಜ್ ಅಝ್‌ಹರ್ ಫೈಝಿ ಬೊಳ್ಳೂರು ಉಸ್ತಾದ್ ದುಆಗೈದರು. ಸಾಗ್ ಬದ್ರಿಯಾ ಜುಮಾ ಮಸೀದಿಯ ಖತೀಬ್ ಇ.ಎಂ. ಅಬ್ದುಲ್ಲಾ ಮದನಿ ಕಾರ್ಯಕ್ರಮ ಉದ್ಘಾಟಿಸಿದರು.
ಸಮಾರಂಭದಲ್ಲಿ ಹಳೆಯಂಗಡಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಎಸ್.ಎ. ಮುಹಮ್ಮದ್ ಸಾಗ್, ಸಂತೆಕಟ್ಟೆ ಜುಮಾ ಮಸೀದಿಯ ಖತೀಬ್ ಇಸ್ಮಾಯೀಲ್ ದಾರಿಮಿ, ಇಂದಿರಾನಗರ ಮಸೀದಿಯ ಮುದರ್ರಿಸ್ ಮುಹಮ್ಮದ್ ಹನೀಫ್ ದಾರಿಮಿ ಅಂಕೋಲಾ, ಹಿಮಾಯತುಲ್ ಇಸ್ಲಾಂ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಶಾಹುಲ್ ಹಮೀದ್ ಹಾಜಿ, ಕದಿಕೆ ಹಳೆಯಂಗಡಿ ಕೇಂದ್ರ ಜುಮಾ ಮಸೀದಿಯ ಕಾರ್ಯದರ್ಶಿ ಅಬ್ದುರ್ರಝಾಕ್ ಮೂಡುತೋಟ ಸಾಗ್, ಅಂಜುಮಾನ್ ಸಂಸ್ಥೆಯ ಅಧ್ಯಕ್ಷ ಸಲೀಂ ಗುಂಡಿ, ಅಬ್ದುರ್ರಶೀದ್ ಮುಸ್ಲಿಯಾರ್, ಮೌಲಾನಾ ಮುಹಮ್ಮದ್ ಹನೀಫ್ ಝಿಯಾಹಿ, ಸಂಸ್ಥೆಯ ಕಾರ್ಯದರ್ಶಿ ಇಲ್ಯಾಸ್ ಕಜಕತೋಟ ಉಪಸ್ಥಿತರಿದ್ದರು.