ಗುರುವಾಯನಕೆರೆ: ಬಸ್ ನಿಲ್ದಾಣ ಉದ್ಘಾಟನೆ
ಬೆಳ್ತಂಗಡಿ, ಜ.11: ಸಂಚಾರಿ ಒತ್ತಡವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಗುರುವಾಯನಕೆರೆ ಪೇಟೆಯ ಬೆಳ್ತಂಗಡಿ ರಸ್ತೆಯ ಬಂಟರ ಭವನದ ಬಳಿ, ನಾರಾವಿ ರಸ್ತೆಯ ಕೆರೆಯ ಬಳಿ, ಮಂಗಳೂರು ರಸ್ತೆಯ ಗುರುವಾಯನಕೆರೆ ಶಾಲೆಯ ಬಳಿ ಹಾಗೂ ಉಪ್ಪಿನಂಗಡಿ ರಸ್ತೆಯ ಕೃಷಿ ಪತ್ತಿನ ಸಹಕಾರಿ ಸಂಘದ ಬಳಿ ಪಟ್ಟಣದ ವಿವಿಧೆಡೆ ನೂತನವಾಗಿ ನಿರ್ಮಿಸಲಾಗಿರುವ ಬಸ್ ನಿಲ್ದಾಣಗಳನ್ನು ಶಾಸಕ ವಸಂತ ಬಂಗೇರಾ ಉದ್ಘಾಟಿಸಿದರು.
ಈ ಸಂದರ್ಭ ತಾಪಂ ಅಧ್ಯಕ್ಷೆ ಜಯಂತಿ ಪಾಲೇದು, ಬಂಟ್ವಾಳ ಎಸ್ಪಿ ರಾಹುಲ್ ಕುಮಾರ್, ಆರ್‌ಟಿಒ ನಾಗರಾಜ್ ಭಟ್, ವೃತ್ತ ನಿರೀಕ್ಷಕ ಬಿ.ಆರ್.ಲಿಂಗಪ್ಪ, ಬೆಳ್ತಂಗಡಿ ಎಸ್ಸೈ ಸಂದೇಶ್, ವೇಣೂರು ಎಸ್ಸೈ ಲತೇಶ್‌ಕುಮಾರ್, ಲೋಕೋಪಯೋಗಿ ಕಾರ್ಯಪಾಲಕ ಎಂಜಿನಿಯರ್ ಸುಭಾಶ್ಚಂದ್ರ, ಎಂಜಿನಿಯರ್ ಶಿವಪ್ರಸಾದ್ ಅಜಿಲ, ವಿಜಯ ಕ್ರಿಡಿಟ್ ಕೋ. ಸೊಸೈಟಿ ಅಧ್ಯಕ್ಷ ಜಯರಾಮ ಶೆಟ್ಟಿ ಪಡಂಗಡಿ, ಬಂಟರ ಸಂಘದ ಅಧ್ಯಕ್ಷ ರಘುರಾಮ ಶೆಟ್ಟಿ ಸಾಧನಾ, ಮಾಜಿ ಅಧ್ಯಕ್ಷ ಜಯರಾಮ ಭಂಡಾರಿ, ಬೆಳ್ತಂಗಡಿ ಲಯನ್ಸ್ ಅಧ್ಯಕ್ಷ ರಾಜು ಶೆಟ್ಟಿ, ವಲಯಾಧ್ಯಕ್ಷ ನಿತ್ಯಾನಂದ ನಾವರ, ಪ್ರಾಂತ ಅಧ್ಯಕ್ಷ ಪ್ರವೀಣ್ ಇಂದ್ರ, ನಿಕಟಪೂರ್ವ ಕಾರ್ಯದರ್ಶಿ ದರಣೇಂದ್ರ ಜೈನ್, ಸದಸ್ಯರಾದ ಸುಶೀಲ ಹೆಗ್ಡೆ, ಪ್ರಸಾದ್ ಶೆಟ್ಟಿ, ಮಂಜುಶ್ರೀ ಜೇಸಿಐ ಅಧ್ಯಕ್ಷ ವಸಂತ ಶೆಟ್ಟಿ, ಶ್ರದ್ಧಾ, ಅನಿಲ್ ನಾಯ್ಗ, ರವೀಂದ್ರ ಶೆಟ್ಟಿ, ಉಮೇಶ್ ಶೆಟ್ಟಿ, ಕುವೆಟ್ಟು ಗ್ರಾಪಂ ಸದಸ್ಯರಾದ ವೃಷಭ ಆರಿಗ, ರಿಯಾಝ್, ಮಾಜಿ ಅಧ್ಯಕ್ಷ ಗೋಪಿನಾಥ ನಾಯಕ್, ಗೋಪಾಲಶೆಟ್ಟಿಯ ಪುತ್ರ ದೀಪಕ್ ಉಪಸ್ಥಿತರಿದ್ದರು.