ದುಬೈ: ಗಲ್ಫ್ ಇಶಾರ ಪತ್ರಿಕೆ ಬಿಡುಗಡೆ
Update: 2016-01-11 23:42 IST
ದುಬೈ, ಜ.11: ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಸಮಸ್ಯೆಗಳಿಗೆ ಸರಕಾರ ಸಕರಾತ್ಮಕವಾಗಿ ಸ್ಪಂದಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಅನಿವಾಸಿ ಕನ್ನಡಿಗರಿಗೆ ಸಿಗಬೇಕಾಗಿರುವ ಸೌಲಭ್ಯಗಳನ್ನು ಒದಗಿಸಲು ನಡೆಸುತ್ತಿರುವ ಪ್ರಯತ್ನದೊಂದಿಗೆ ಕೈಜೋಡಿಸಲು ಸಿದ್ಧ ಎಂದು ಕರ್ನಾಟಕ ವಿಧಾನಸಭೆೆಯ ಸ್ಪೀಕರ್ ಕಾಗೋಡು ತಿಮ್ಮಪ್ಪ ಭರವಸೆ ನೀಡಿದರು. ಕೆಸಿಎಫ್ ಸಾರಥ್ಯದಲ್ಲಿ ಆರಂಭಗೊಂಡ ‘ಗಲ್ಫ್ ಇಶಾರ’ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತಾಡಿದರು.