×
Ad

ಹಳೆಯಂಗಡಿ: ಮನೆಗೆ ಬೆಂಕಿ; ಸೊತ್ತು ನಾಶ

Update: 2016-01-11 23:58 IST

 ಹಳೆಯಂಗಡಿ, ಜ.11: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಇಂದಿರಾನಗರದ ಮನೆಯೊಂದು ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿಗಾಹುತಿಯಾದ ಘಟನೆ ಸೋಮವಾರ ಅಪರಾಹ್ನ ನಡೆದಿದೆ.

ದಿ.ಅಬ್ದುಲ್ ಖಾದರ್ ಎಂಬವರಿಗೆ ಸೇರಿದ ಈ ಮನೆಯಲ್ಲಿ ಅವರ ಪುತ್ರ ದಾವೂದ್ ವಾಸಿಸುತ್ತಿದ್ದು, ದುರ್ಘಟನೆ ಸಂಭವಿಸಿದಾಗ ಆತ ಮನೆಯಲ್ಲಿರಲಿಲ್ಲ ಎಂದು ತಿಳಿದು ಬಂದಿದೆ.

ಈ ದುರ್ಘಟನೆಯಿಂದ ಮನೆ, ಶಾಲೆ ಹಾಗೂ ಇತರ ದಾಖಲೆಪತ್ರಗಳು, ಪೀಠೋಪಕರಣಗಳು, ಬಟ್ಟೆ ಬರೆ, ಪಾತ್ರೆಗಳು ಸೇರಿದಂತೆ ಮನೆಯೊಳಗಿದ್ದ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಟಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.

ಬೆಂಕಿ ಹೊತ್ತಿಕೊಂಡ ವೇಳೆ ಸ್ಥಳೀಯರು ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದರು. ಆದರೆ ಇಂದಿರಾನಗರದಲ್ಲಿ ರೈಲಿನ ಗೇಟ್ ಬಿದ್ದ ಕಾರಣ ಅದು ಸಕಾಲಕ್ಕೆ ತಲುಪಲಾಗಲಿಲ್ಲಬೆಂಕಿಗೆ ಮನೆಯ ವಸ್ತುಗಳು ಭಾಗಶ: ಸುಟ್ಟು ಕರಕಲಾಗಿದೆ. ಆದರೂ ಸ್ಥಳೀಯರು ನೀರಿನ ಟ್ಯಾಂಕರ್ ಮೂಲಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News