×
Ad

ಉದ್ಯಾವರ ಉರೂಸ್: ವಿಶೇಷ ಪ್ರಾರ್ಥನೆ ಕುಂಜತ್ತೂರು,

Update: 2016-01-12 00:29 IST

ಜ.11: ಉದ್ಯಾವರ ಮಖಾಂ ಉರೂಸ್‌ನ ನಾಲ್ಕನೆ ದಿನವಾದ ಶನಿವಾರ ರಾತ್ರಿ ಸಮೂಹ ಪ್ರಾರ್ಥನೆ ನಡೆಯಿತು. ಪಯ್ಯಕ್ಕಿ ಅಬ್ದುಲ್ ಖಾದರ್ ಉಸ್ತಾದ್ ನೇತೃತ್ವ ನೀಡಿದರು.

ಕುಮ್ಮನಂ ನಿಝಾಮುದ್ದೀನ್ ಅಝ್ಹರಿ ಮುಖ್ಯ ಭಾಷಣ ಮಾಡಿದರು. ದರ್ಗಾ ಶರ್ೀನಲ್ಲೂ ವಿಶೇಷ ಪ್ರಾರ್ಥನೆ ನೆರವೇರಿತು. ಅತಾವುಲ್ಲ ತಂಳ್ ಅಧ್ಯಕ್ಷತೆ ವಹಿಸಿದ್ದರು. ಜಮಾಅತ್ ಕೋಶಾಕಾರಿ ನಿಝಾರ್ ಕೆ.ಎ.ಕೆ., ಕಾರ್ಯದರ್ಶಿ ಎಸ್.ಎಂ.ಬಶೀರ್, ಮುಹಮ್ಮದ್ ಮೌಲವಿ ಕುನ್ನು, ಇಬ್ರಾಹೀಂ ೈಝಿ ಉದ್ಯಾವರ, ಅಬೂಬಕರ್ ಮಾಹಿನ್, ಅಬ್ದುಲ್ಲ ಪೋಕರ್, ಇಬ್ರಾಹೀಂ ಉಮರ್ ಹಾಜಿ, ಖತೀಬ್ ಅಬ್ದುಸ್ಸಲಾಂ ಮೌಲವಿ, ಜಮಾಅತ್ ಮಾಜಿ ಅಧ್ಯಕ್ಷ ಮೋನು ಹಾಜಿ, ವಸೂರು ಅಬ್ದುರ್ರಹ್ಮಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News