×
Ad

ಜ.14ರಂದು ‘ಕಾಫಿ ಟೇಬಲ್’ ಪುಸ್ತಕ ಬಿಡುಗಡೆ

Update: 2016-01-12 00:30 IST

ಉ ಡುಪಿ, ಜ.11: ಛಾಯಾಚಿತ್ರ- ಪತ್ರಕರ್ತ ಆಸ್ಟ್ರೋ ಮೋಹನ್ ಉಡುಪಿ-ಮಣಿಪಾಲ ನಗರಗಳಲ್ಲಿ ಸೆರೆಹಿಡಿದ 192 ವರ್ಣಮಯ ಚಿತ್ರಗಳನ್ನೊಳಗೊಂಡ ‘ಕಾಫಿ ಟೇಬಲ್’ ಪುಸ್ತಕ ‘ಪಿಕ್ಟೋರಿಯಲ್ ಜರ್ನಿ ಟು ಉಡುಪಿ- ಮಣಿಪಾಲ’ ಇದೇ ಜ.14ರಂದು ಅನಾವರಣಗೊಳ್ಳಲಿದೆ.

ಸೋಮವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಪುಸ್ತಕದ ಪ್ರಕಾಶಕರಾದ ಭೂತರಾಜ ಪ್ರಕಾಶನದ ಪ್ರವೀಣಾ ಮೋಹನ್ ತಿಳಿಸಿದರು. ಸುಮಾರು 200 ಪುಟಗಳನ್ನೊಳಗೊಂಡ ಈ ಚಿತ್ರ ಸಂಪುಟ ದಲ್ಲಿ 11 ಅಧ್ಯಾಯಗಳಿವೆ ಎಂದು ಆಸ್ಟ್ರೋಮೋಹನ್ ತಿಳಿಸಿದರು.
ಜ.14ರಂದು ಪೂರ್ವಾಹ್ನ 11ಕ್ಕೆ ಹೊಟೇಲ್ ಕಿದಿಯೂರಿನ ಪವನ್‌ರೂಫ್ ಟಾಪ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಕೃತಿ ಅನಾವರಣಗೊಳಿಸುವರು. ಪೇಜಾವರ ಮಠಾಧೀಶ ಶ್ರೀವಿಶ್ವೇಶ ತೀರ್ಥರು ಆಶೀರ್ವಚನ ನೀಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News