×
Ad

ಫೆ.7: ವಿದ್ಯಾರ್ಥಿಗಳಿಗೆ ಇಸ್ಲಾಮಿಕ್ ಮಾಡ್ಯೂಲ್ ಸ್ಪರ್ಧೆ

Update: 2016-01-12 00:30 IST

ಮ ಂಗಳೂರು, ಜ.11: ವಿದ್ಯಾರ್ಥಿಗಳಲ್ಲಿ ಅರಬಿಕ್ ಭಾಷೆ ಮತ್ತು ಇಸ್ಲಾಮೀ ಜ್ಞಾನವನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಮಂಗಳೂರಿನ ಹಿದಾಯ ಮೆಸ್ಕೊ ಅರೆಬಿಕ್ ಅಕಾಡಮಿಯು 'ಇಸ್ಲಾಮಿಕ್ ಮಾಡ್ಯೂಲ್ ಎಕ್ಪೊ-2016' ಹೆಸರಿನ ಪ್ರಾತ್ಯಕ್ಷಿಕೆ ಸ್ಪರ್ಧೆಯೊಂದನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋ ಜಿಸಿದೆ. ದ.ಕ. ಮತ್ತು ಉಡುಪಿ ಜಿಲ್ಲಾಮಟ್ಟದ ಈ ಸ್ಪರ್ಧೆಯು ಫೆ.7ರಂದು ನಗರದ ಹೈಲಾಂಡ್‌ನಲ್ಲಿ ನಡೆಯಲಿದೆ. ವಿಜೇತ ರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹು ಮಾನಗಳು ಕ್ರಮವಾಗಿ ರೂ. 3,000, ರೂ. 2,000 ಮತ್ತು ರೂ. 1,000 ನಿಗದಿಪಡಿಸಲಾಗಿದ್ದು, ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು. ಒಂದು ಶಾಲೆಯಿಂದ ಒಂದು ತಂಡಕ್ಕೆ ಮಾತ್ರ ಅವಕಾಶವಿದ್ದು, ತಂಡದಲ್ಲಿ ಗರಿಷ್ಠ 3 ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.
ಹೆಸರು ನೋಂದಣಿಗೆ ಜ.20 ಕೊನೆಯ ದಿನಾಂಕವಾಗಿದ್ದು, ಆಸಕ್ತರು ಹೆಚ್ಚಿನ ವಿವರ ಮತ್ತು ನೋಂದಣಿಗೆ ಹಿದಾಯ: ಮೆಸ್ಕೊ ಅರಬಿಕ್ ಅಕಾಡಮಿ, 2ನೆ ಮಹಡಿ, ಎಪಿಎಸ್ ಕಾಂಪ್ಲೆಕ್ಸ್, ಹೈಲ್ಯಾಂಡ್, ಮಂಗಳೂರು- 575002 ಅಥವಾ ದೂ.: 8951302476, 9632005838 ಅನ್ನು ಸಂಪರ್ಕಿ ಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News