×
Ad

ಕಾಸರಗೋಡು : ಚೆರ್ಕಳ - ಕಲ್ಲಡ್ಕ ರಾಜ್ಯ ಹೆದ್ದಾರಿಯ ಅವ್ಯವಸ್ಥೆಯನ್ನು ಖಂಡಿಸಿ ರಸ್ತೆ ತಡೆ

Update: 2016-01-12 18:02 IST

ಕಾಸರಗೋಡು :  ಚೆರ್ಕಳ - ಕಲ್ಲಡ್ಕ   ರಾಜ್ಯ ಹೆದ್ದಾರಿಯ ಅವ್ಯವಸ್ಥೆಯನ್ನು  ಖಂಡಿಸಿ  ಕ್ರಿಯಾ ಸಮಿತಿ ವತಿಯಿಂದ ಮಂಗಳವಾರ  ಮೂರು ಕಡೆಗಳಲ್ಲಿ ರಸ್ತೆ ತಡೆ   ನಡೆಸಿದರು.  ಬದಿಯಡ್ಕ , ನೆಲ್ಲಿಕಟ್ಟೆ, ಪೆರ್ಲ  ಪೇಟೆಯಲ್ಲಿ  ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು. ಬದಿಯಡ್ಕ ದಲ್ಲಿ ನಡೆದ  ಪ್ರತಿಭಟನೆಯನ್ನು  ವರ್ತಕರ ಸಂಘದ  ಬದಿಯಡ್ಕ ಘಟಕ ಅಧ್ಯಕ್ಷ  ಎಸ್ . ಎನ್  ಮಯ್ಯ  ಉದ್ಘಾಟಿಸಿದರು. 
ಮುಖಂಡರಾದ  ಕುಂಜಾರು ಮುಹಮ್ಮದ್ , ಜ್ಞಾನದೇವ ಶೆಣೈ ಉಪಸ್ಥಿತರಿದ್ದರು.  ಪೆರ್ಲದಲ್ಲಿ ನಡೆದ ಪ್ರತಿಭಟನೆಯನ್ನು   ಅಬ್ದುಲ್ ರಹಿಮಾನ್  ಉದ್ಘಾಟಿಸಿದರು.  ಪ್ರಸಾದ್ ಟಿ ., ಬಾಲಕೃಷ್ಣ ಭಟ್ , ನೆಲ್ಲಿಕಟ್ಟೆ ಯಲ್ಲಿ  ನಡೆದ ರಸ್ತೆ ತಡೆಯನ್ನು   ಅಬ್ದುಲ್  ಕುನ್ಚಿ  ಉದ್ಘಾಟಿಸಿದರು. ಕೆ. ಇಬ್ರಾಹಿಮ್ , ಅಬೂಬಕ್ಕರ್  ಉಪಸ್ಥಿತರಿದ್ದರು. 
ಚೆರ್ಕಳದಿಂದ  ನೆಲ್ಲಿಕಟ್ಟೆ - ಬದಿಯಡ್ಕ - ಪೆರ್ಲ ಮೂಲಕ  ಅಡ್ಕಸ್ಥಳ ತನಕದ  ಸುಮಾರು ೩೦ ಕಿ. ಮೀ  ರಾಜ್ಯಹೆದ್ದಾರಿಯ ಬಹುತೇಕ  ರಸ್ತೆಯು  ಹೆದೆಗೆಟ್ಟಿದ್ದು ,  ವಾಹನ ಸಂಚಾರ ಕ್ಕೆ   ತೊಡಕಾಗಿ ಪರಿಣಮಿಸಿದೆ.  ಹತ್ತು  ವರ್ಷಗಳಿಂದ  ರಸ್ತೆ  ದುರಸ್ತಿ  ಹಾಗೂ  ಡಾಮರಿಕರಣಗೊಳಿಸಿಲ್ಲ. ಇದರಿಂದ ರಸ್ತೆ ಸಂಚಾರ ದುಸ್ತರವಾಗಿ ಪರಿಣಮಿಸಿದೆ   
ಕಾಸರಗೋಡು : ಹಲವು ಬೇಡಿಕೆಗಳನ್ನು  ಮುಂದಿಟ್ಟುಕೊಂಡು  ಪ್ರತಿಪಕ್ಷ ಬೆಂಬಲಿತ ಸರಕಾರಿ  ನೌಕರರು  ಮಂಗಳವಾರ   ಮುಷ್ಕರ  ನಡೆಸಿದರು.  ಇದರಿಂದ ಸರಕಾರಿ  ಕಚೇರಿ ಮತ್ತು ಶಾಲೆಗಳಲ್ಲಿ  ಹಾಜರಾತಿ ವಿಳಂಬವಾಗಿತ್ತು.  ಜಿಲ್ಲಾಧಿಕಾರಿ ಕಚೇರಿ ಹೊಂದಿರುವ ಕಾಸರಗೋಡು ಸಿವಿಲ್ ಸ್ಟೇಶನ್ , ತಾಲೂಕು ಕಚೇರಿ  ಮೊದಲಾದೆಡೆಗಳಲ್ಲಿ  ಹಾಜರಾತಿ ಕಡಿಮೆ ಇತ್ತು.  ನೌಕರರ ಮುಸ್ಖರದಿಂದ ಸರಕಾರಿ  ಕಛೇರಿಗಳ  ದೈನಂದಿನ  ಚಟುವಟಿಕೆ ಅಸ್ತವ್ಯಸ್ಥಗೊಂಡಿತು. 
ಹುದ್ದೆಗಳನ್ನು ಕಡಿತಗೊಳಿಸುವ  ಹುನ್ನಾರವನ್ನು  ಕೈಬಿಡಬೇಕು,  ವೇತನ ಪರಿಷ್ಕಾರ  ಶೀಘ್ರ ಜಾರಿಗೆ ತರಬೇಕು,  ಬೆಲೆಯೇರಿಕೆಯನ್ನು  ತಡೆಗಟ್ಟಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು  ಮುಷ್ಕರ  ನಡೆಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News