×
Ad

ಜೈಲಿನಿಂದ 105ರ ಹರೆಯದ ಪತಿಯ ಬಿಡುಗಡೆಗೆ ಪ್ರಾರ್ಥಿಸುತ್ತಿರುವ 90 ಹರೆಯದ ಪತ್ನಿ !

Update: 2016-01-12 18:07 IST

ಗೊರಖಪುರ, ಜ.12: ಸುನ್ರಾ ದೇವಿಗೆ 90ರ ಹರೆಯ. ಗೊರಖಪುರದ ಈಕೆ ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದಾರೆ. ಆದರೆ ದಿನದ ಬಹುಪಾಲು ಸಮಯವನ್ನು ಪ್ರಾರ್ಥನೆಯಲ್ಲಿ ಕಳೆಯುತ್ತಿದ್ದಾರೆ. ಸುನ್ರಾ ದೇವಿ ತನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿಲ್ಲ. ಬದಲಾಗಿ ತನ್ನ ಗಂಡನ ಆರೋಗ್ಯಕ್ಕಾಗಿ ಮತ್ತು ಆತನ ಬಿಡುಗಡೆಗೆ ಪ್ರಾರ್ಥಿಸುತ್ತಿದ್ದಾರೆ.

ಉತ್ತರ ಪ್ರದೇಶದ 105ರ ಹರೆಯದ ಆಕೆಯ ಪತಿ ಚೌಥಿ ಯಾದವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 2004ರಲ್ಲಿ ಜೈಲು ಸೇರಿದ್ದರು. ಆಗ ಅವರಿಗೆ 94 ವರ್ಷವಾಗಿತ್ತು. ಅಂದಿನಿಂದ ಇಂದಿನ ವರೆಗೂ ಪತಿಯ ಆಗಮನಕ್ಕಾಗಿ ಸುನ್ರಾ ದೇವಿ ಕಾಯುತ್ತಿದ್ದಾರೆ. ಪತಿ ಚೌಥಿ  ಯಾದವ್ ಜೈಲಿನಲ್ಲಿ ಸಾಯುದನ್ನು ನೋಡುವ ದಯನೀಯ ಸ್ಥಿತಿ ಬಾರದಿರಲಿ ಎನ್ನುವುದು ಆಕೆಯ ಕಳಕಳಿ. ಸುನ್ರಾ ಕಳೆದ 12 ವರ್ಷಗಳಿಂದ ತನ್ನ ಗಂಡನನ್ನು ನೋಡಿಲ್ಲವಂತೆ.

ಮಲಾವೊನ್ ಗ್ರಾಮದ ಬಿಲ್ಲಾಪುರದ ಚೌಥಿ ಸಿಂಗ್‌ನ್ನು 2010ರಲ್ಲಿ ವಾರಣಾಶಿಯ ಜೈಲು ಆಡಳಿತವು ಸ್ವಾತಂತ್ರ ದಿನಾಚರಣಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿತ್ತು. ಸುನ್ರಾ ದೇವಿ ಕುಟುಂಬ ರಾಷ್ಟ್ರಪತಿ ಪ್ರಣವ್ ಮುಖರ್ಜಿ , ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ರಾಜ್ಯಪಾಲ ರಾಮ್ ನಾಯ್ಕಿ ಮತ್ತು ಬಂದೀಖಾನೆ ಸಚಿವ ಬಲ್ವಂತ್ ಸಿಂಗ್ ರಾಮೋವಾಲಿಯಾ ಮನವಿ ಸಲ್ಲಿಸಿ ಚೌಥಿ ಯಾದವ್ ಅವರನ್ನು ಮಾನವೀಯ ನೆಲೆಯಲ್ಲಿ ಬಿಡುಗಡೆಗೊಳಿಸುವಂತೆ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News