×
Ad

ಕಾಸರಗೋಡು : ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆ - ಯಡಿಯೂರಪ್ಪ

Update: 2016-01-12 19:00 IST

ಕಾಸರಗೋಡು : ನರೇಂದ್ರ ಮೋದಿ ಅಧಿಕಾರಕ್ಕೆ  ಬಂದ ಬಳಿಕ ಎಲ್ಲಾ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆಯಿಂದ ದೇಶ  ಅಭಿವೃದ್ಧಿ ಪಥದಲ್ಲಿ  ಸಾಗಿದೆ ಎಂದು  ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿ.ಎಸ್  ಯಡಿಯೂರಪ್ಪ ಹೇಳಿದರು. 
ಅವರು ಮಂಗಳವಾರ  ಕಾಸರಗೋಡು  ನಗರಸಭಾ  ಸಭಾಂಗಣದಲ್ಲಿ ನಡೆದ  ವಿವೇಕಾನಂದ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ವಿವೇಕಾನಂದ ಜಯಂತಿ ಉತ್ಸವ ಉದ್ಘಾಟಿಸಿ ಮಾತನಾಡಿದರು.
  ಟ್ರಸ್ಟ್ ಅಧ್ಯಕ್ಷ ಎನ್.ಸತೀಶ ಅಧ್ಯಕ್ಷತೆ ವಹಿಸಿದರು.
ಟ್ರಸ್ಟ್ ವೆಬ್‌ಸೈಟ್‌ನ್ನು  ಸಂಸದೆ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿ ಮಾತನಾಡಿದರು. ಆರ್‌ಎಸ್‌ಎಸ್ ಕೇರಳ ಪ್ರಾಂತ್ಯ ಸಹ ಸಂಘ ಚಾಲಕ್ ಅಡ್ವಾ. ಕೆ.ಬಲರಾಮ್ ಮುಖ್ಯ ಅತಿಥಿಯಾಗಿ ಆಗಮಿಸಿದರು. ವಿವೇಕಾನಂದ ಟ್ರಸ್ಟ್ ಲೋಗೋವನ್ನು ಆರ್‌ಎಸ್‌ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಸೇವಾ ಪ್ರಮುಖ್ ಗೋಪಾಲ ಚೆಟ್ಟಿಯಾರ್ ನಿರ್ವಹಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್, ಬಿಎಂಎಸ್ ರಾಜ್ಯ ಕಾರ್ಯದರ್ಶಿ ಅಡ್ವಾ.ಮುರಳೀಧರನ್  ಮಾತನಾಡಿದರು. ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮರ್ಜುನ ಹೆಗಡೆ, ಬಿಜೆಪಿ ಜಿಲ್ಲಾಧ್ಯಕ್ಷ ಪಿ.ಸುರೇಶ್ ಕುಮಾರ್ ಶೆಟ್ಟಿ, ಹಿಂದುಐಕ್ಯವೇದಿ ರಾಜ್ಯ ಉಪಾಧ್ಯಕ್ಷ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಉಪಸ್ಥಿತರಿದ್ದರು.
ಟ್ರಸ್ಟ್‌ನ ವತಿಯಿಂದ ಖ್ಯಾತ ವೈದ್ಯ ಡಾ.ಶ್ರೀಪಾದ ರಾವ್, ಕೇಸರಿ ರವಿ, ಖ್ಯಾತ ಯಕ್ಷಗಾನ ಕಲಾವಿದ ಕೆ.ವಿ.ರಮೇಶ್ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಲ್ಲದೇ ಉದಯ ನಾವಡ ಮಧೂರು, ಸುಮಲತ ನೆಲ್ಕಳ, ಉದಯ ಕುಮಾರ್ ನಾಗರಕಟ್ಟೆ ಅವರಿಗೆ ಸಹಾಯಧನ ನೀಡಲಾಯಿತು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News