×
Ad

ಕಾಸರಗೋಡು : ಹೋಟೆಲ್ ಗೆ ನುಗ್ಗಿ ಕಳವು ನಡೆಸಿದ ಆರೋಪಿಯ ಬಂಧನ.

Update: 2016-01-12 19:07 IST

ಕಾಸರಗೋಡು : ಹೋಟೆಲ್ ಗೆ ನುಗ್ಗಿ   ಕಳವು  ನಡೆಸಿದ  ಆರೋಪಿಯನ್ನು  ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.  ಬಂಧಿತನನ್ನು  ಮಟ್ಟನ್ನೂರಿನ ಅಬ್ದುಲ್ ಜಲೀಲ್ (೩೫)  ಎಂದು ಗುರುತಿಸಲಾಗಿದೆ.  ಮಂಜೇಶ್ವರದಲ್ಲಿ  ಹೋಟೆಲ್ ನ   ಶಟರ್  ಮುರಿದು  ಕಳವು ಗೈದ  ಪ್ರಕರಣಕ್ಕೆ  ಸಂಬಂಧಪಟ್ಟಂತೆ  ಈತನನ್ನು  ಬಂಧಿಸಲಾಗಿದ್ದು ,ಈತ  ಕುಂಬಳೆ ,  ಮಂಜೇಶ್ವರ ವ್ಯಾಪ್ತಿಯಲ್ಲಿ  ನಡೆದ   ಹಲವು ಪ್ರ ಕಳವು ಪ್ರಕರಣದಲ್ಲಿ  ಆರೋಪಿಯಾಗಿದ್ದಾನೆ ಎಂದು  ಪೊಲೀಸರು ತಿಳಿಸಿದ್ದಾರೆ . ಇದಲ್ಲದೆ  ಕಣ್ಣೂರು ಜಿಲ್ಲೆಯ ಹಲವು  ಟಾಣಾ  ವ್ಯಾಪ್ತಿಯಲ್ಲಿ ನಡೆದ  ಕಳವು ಪ್ರಕರಣಗಳಲ್ಲೂ ಶಾಮಿಲಾಗಿದ್ದಾನೆ.     
ಮಂಜೇಶ್ವರ ದ  ಹೋಟೆಲ್ ನಿಂದ  ಒಂದು ಸಾವಿರ ರೂ . ನಗದನ್ನು ಕಳವು ಮಾಡಿದ್ದನು . ಜನವರಿ ಹತ್ತರಂದು ಘಟನೆ ನಡೆದಿತ್ತು. ಈ ಬಗ್ಗೆ  ಮಂಜೇಶ್ವರ ಟಾಣಾ  ಪೊಲೀಸರಿಗೆ ದೂರು  ನೀಡಲಾಗಿತ್ತು 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News