×
Ad

ಜ. 12: ಬಾಂಧವ್ಯದಿಂದ ಮಾನವ ಹಕ್ಕುಗಳ ಶಾಂತಿ ಜಾಥಾ

Update: 2016-01-12 19:43 IST

ಮಂಗಳೂರು, ಜ. 12: ಬಾಂಧವ್ಯ ಒಕ್ಕೂಟ ಮಂಗಳೂರು ಇದರ ದಶಮಾನೋತ್ಸವ ಅಂಗವಾಗಿ ಮಾನವ ಹಕ್ಕುಗಳ ಶಾಂತಿ ಜಾಥಾ ಮತುತಿ ಸಮಾವೇಶ ಜ. 16ರಂದು ನಡೆಯಲಿದೆ ಎಂದು ಫಾ| ವಿನೋದ್ ಮಸ್ಕರೇನ್ಹಸ್ ತಿಳಿಸಿದ್ದಾರೆ.

 ದ.ಕ. ಮತುತಿ ಕಾಸರಗೋಡು ಜಿಲ್ಲೆಯ ಬಡಜನರ ಮತ್ತು ನಿರ್ಗತಿಕರ ಅಭಿವೃದ್ಧಿಗಾಗಿ ಬಾಂಧವ್ಯ ಒಕ್ಕೂಟವು ಕಳೆದ 10 ವರ್ಷಗಳಿಂದ ವಿವಿಧ ಜಾಗೃತಿ ಹಾಗೂ ಮಾಹಿತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚುತಿತಿರುವ ಹಿನ್ನೆಲೆಯಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಅವಶ್ಯವಿದೆ. ಈ ನಿಟ್ಟಿನಲ್ಲಿ ಶಾಂತಿ ಜಾಥಾ ಮತ್ತು ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

 ಬೆಳಗ್ಗೆ 9.30ಕ್ಕೆ ಮಿಲಾಗ್ರಿಸ್ ಚರ್ಚ್ ಮೈದಾನದಿಂದ ರ್ಯಾಲಿ ನಡೆಯಲಿದೆ. ಬಳಿಕ ಬೆಂದೂರು ಸೈಂಟ್ ಆಗ್ನೇಸ್ ಸ್ಪೆಷಲ್ ಸ್ಕೂಲ್ ಮೈದಾನದಲ್ಲಿ ಸಮಾವೇಶ ಜರಗಲಿದೆ ಎಂದು ಅವರು ತಿಳಿಸಿದರು.

ಒಕ್ಕೂಟದ ಕಾರ್ಯದರ್ಶಿ ವಂ ಓಸ್ವಾಲ್ಡ್ ಮೊಂತೆರೋ, ಧರ್ಮಜ್ಯೋತಿ ಸಮಾಜ ಸೇವಾ ಸಂಸ್ಥೆ ಮುಖ್ಯಸ್ಥೆ ಡ್ಯಾಫ್ನಿ, ಸಿ ಸೆಲಿನ್, ವಿಕ್ಟರ್‌ವಾಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News