×
Ad

ಸುರತ್ಕಲ್: 27ನೇ ರಸ್ತೆ ಸುರಕ್ಷತಾ ಸಪ್ತಾಹ 2016

Update: 2016-01-12 21:31 IST

ಸುರತ್ಕಲ್, ಜ.12:  ಮಂಗಳೂರು ನಗರ ಪೊಲೀಸ್ , ಮಂಗಳೂರು ಉತ್ತರ ವಲಯ ಸಂಚಾರಿ ಪೊಲೀಸರ ಆಶ್ರಯದಲ್ಲಿ ವಿದ್ಯಾದಾಯಿನಿ, ಗೋವಿಂದದಾಸ ಕಾಲೇಜು ಹಾಗೂ ಹಲವು ಸಂಘ ಸಂಸ್ಥೆಗಳ ಸಹಕಾರದೊಂದಿಗೆ 27ನೇ ರಸ್ತೆ ಸುರಕ್ಷತಾ ಸಪ್ತಾಹ 2016 ದ ಪ್ರಯುಕ್ತ ಸುರತ್ಕಲ್ ಪರಿಸರದಲ್ಲಿ ಬೃಹತ್ ಜಾಥಾ ನಡೆಯಿತು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಂಗಳೂರು ಉತ್ತರ ವಲಯ ಸಂಚಾರಿ ಠಾಣೆಯ ವೃತ್ತ ನಿರೀಕ್ಷಕ ಮಂಜುನಾಥ್, ನಮ್ಮ ವ್ಯಾಪ್ತಿಯ ಮುಲ್ಕಿ ಯಿಂದ ಎ.ಜೆ. ಆಸ್ಪತ್ರೆ ಕುಂಟಿಕಾನಾ ವರೆಗೆ ವಾರಗಳ ಎಲ್ಲ ಚಾಲಕ ನಿರ್ವಾಹಕರಿಗೆ, ಸಾರ್ವಜನಿಕರಿಗೆ ಹಾಗೂ ಪ್ರತೀ ಶಾಲೆ ಕಾಲೇಜುಗಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ವಿವಿಧ ಸ್ಪರ್ಧೆಗಳನ್ನು ನಡೆಸುತ್ತಾ ಈ ಮೂಲಕ ಕಾರ್ಯಾಗಾರ ನಡೆಸಲಾಗುವುದು ಎಂದರು
ಇದೇ ವೇಳೆ ಸುರತ್ಕಲ್ ವ್ಯಾಪ್ತಿಯ ಎಲ್ಲಾ ಚಾಲಕ ನಿರ್ವಾಹಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
 ಈ ವೇಳೆ ಸುರತ್ಕಲ್ನ ರೋಟರಿಯ ಅಧ್ಯಕ್ಷ ರಾಜ್ಮೋಹನ್ ರಾವ್, ಇನ್ನರ್ ನ ಅಧ್ಯಕ್ಷೆ ವಿಧ್ಯಾ ಅರವಿಂದ್, ಗೋವಿಂದ ದಾಸ ಕಾಲೇಜಿನ ಪ್ರನ್ಸಿಪಾಲ್ ಡಾ. ಬಿ. ಮುರಳೀದರ ರಾವ್, ಉಪ ಪ್ರಿನ್ಸಿಪಾಲ್ ಪ್ರೊ.ಕೃಷ್ಣ ಮೂರ್ತಿ, ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್, ದಯಾನಂದ ಶೆಟ್ಟಿ ಕಡಂಬೋಡಿ, ಉಮೇಶ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News