×
Ad

ಇನ್​ಕ್ರೆಡಿಬಲ್ ಇಂಡಿಯಾ" ರಾಯಭಾರಿ ವಿವಾದ: "ದಯಮಾಡಿ ನನ್ನನ್ನು ದೂರವಿಡಿ" : ಶಾರೂಖ್‌ ಖಾನ್‌

Update: 2016-01-12 22:01 IST


ಕೋಲ್ಕತಾ, ಜ.12: ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರೂಖ್‌ ಖಾನ್‌  ಅವರು ಬಾಲಿವುಡ್ ನಟ  ಆಮೀರ್ ಖಾನ್‌- ಬಿಗ್‌  ಬಿ ಅಮಿತಾಭ್‌ ಬಚ್ಚನ್‌ ಅವರ ಇನ್​ಕ್ರೆಡಿಬಲ್ ಇಂಡಿಯಾ ರಾಯಭಾರಿ ಚರ್ಚಾ ವಿವಾದದಿಂದ ದೂರ ಉಳಿಯಲು ಬಯಸಿದ್ದಾರೆ

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸೋಮವಾರ ಇಲ್ಲಿಗೆ ಆಗಮಿಸಿದ್ದ ಶಾರೂಖ್‌ ಅವರನ್ನು "ಇನ್‌ಕ್ರೆಡಿಬಲ್‌ ಇಂಡಿಯಾ' ( ವಿಸ್ಮಯಕಾರಿ ಭಾರತ) ಆಂದೋಲನದ ರಾಯಭಾರಿ ಹುದ್ದೆಯಿಂದ ಸೂಪರ‍್ ಸ್ಟಾರ್‌   ಆಮಿರ್‌ ಖಾನ್‌ರನ್ನು ಕೆಳಗಿಸಿ  ತೆರವಾಗಿರುವ ಸ್ಥಾನಕ್ಕೆ   ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಅವರನ್ನು ನೇಮಕಗೊಳಿಸಿದ  ವಿಚಾರದ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ " ನನಗೆ ಅದು ಸಂಬಂಧಿಸಿದ್ದಲ್ಲ. ನಾನು ರಾಯಭಾರಿಯಾಗಿ ನೇಮಕಗೊಳ್ಳದಿದ್ದರೂ ಕಳೆದುಕೊಳ್ಳುವುದು ಏನು ಇಲ್ಲ . ದಯಮಾಡಿ ನನ್ನನ್ನು ಈ ವಿವಾದದಿಂದ ದೂರವಿಡಿ " ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News