×
Ad

ಜೆಟ್ ಇಂಧನ ಇಳಿಕೆಗೆ ರಾಜ್ಯಗಳಿಗೆ ಸೂಚನೆ

Update: 2016-01-12 23:44 IST

ವಿಶಾಖಪಟ್ಟಣಂ, ಜ.12: ವಿಮಾನಯಾನ ಕ್ಷೇತ್ರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ, ಜೆಟ್ ಇಂಧನ ಮೇಲಿನ ವೌಲ್ಯವರ್ಧಿತ ತೆರಿಗೆ (ವ್ಯಾಟ್)ಯಲ್ಲಿ ಇಳಿಕೆ ಮಾಡುವಂತೆ ಕೇಂದ್ರ ಸರಕಾರವು, ರಾಜ್ಯ ಸರಕಾರಗಳಿಗೆ ಸೂಚಿಸಿದೆಯೆಂದು , ನಾಗರಿಕ ವಾಯುಯಾನ ಸಚಿವ ಅಶೋಕ್ ಗಜಪತಿ ರಾಜು ಮಂಗಳವಾರ ತಿಳಿಸಿದ್ದಾರೆ. ಜೆಟ್ ಇಂಧನ (ಎಟಿಎಫ್)ದ ಮೇಲಿನ ವ್ಯಾಟ್ ತೆರಿಗೆಯಲ್ಲಿ ಇಳಿಕೆ ಮಾಡುವಂತೆ ನಾಗರಿಕ ವಿಮಾನಯಾನ ಸಚಿವಾಲಯವು, ಎಲ್ಲಾ ರಾಜ್ಯ ಸರಕಾರಗಳಿಗೆ ಪತ್ರ ಬರೆದಿದೆಯೆಂದು ಅವರು ಹೇಳಿದ್ದಾರೆ. ವಿಮಾನಯಾನ ಸಂಸ್ಥೆಗಳ ನಿರ್ವಹಣಾ ವೆಚ್ಚದ ಗಣನೀಯ ಭಾಗವು ವ್ಯಾಟ್ ತೆರಿಗೆಗೆ ಹೋಗುತ್ತಿದೆಯೆಂದು ಇಲಾಖೆಯ ಮೂಲಗಳು ತಿಳಿಸಿವೆ.
 ವಿಶಾಖಪಟ್ಟಣಂನಲ್ಲಿ ಮಂಗಳವಾರ ನಡೆದ ಭಾರತೀಯ ಉದ್ಯಮ ಮಂಡಳಿಯ ಪಾಲುದಾರಿಕೆ ಶೃಂಗಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಆಂಧ್ರ ಸರಕಾರವು ಜೆಟ್ ಇಂಧನದ ಮೇಲಿನ ವ್ಯಾಟ್ ತೆರಿಗೆಯನ್ನು ಇಳಿಸುವ ಮೂಲಕ ಭಾರೀ ಪ್ರಯೋಜನವನ್ನು ಪಡೆದುಕೊಂಡಿದೆಯೆಂದು ತಿಳಿಸಿದರು. ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ವಿಮಾನನಿಲ್ದಾಣಗಳನ್ನು ಆಧುನೀಕರಿಸಬೇಕೆಂದು ಅವರು ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News