ವರ್ಗಾವಣೆಗೊಂಡ ಪೊಲೀಸರಿಗೆ ಸನ್ಮಾನ
Update: 2016-01-12 23:45 IST
ವಿಟ್ಲ, ಜ.12: ಭಡ್ತಿ ಪಡೆದು ವಿವಿಧ ಠಾಣೆಗಳಿಗೆ ವರ್ಗಾವಣೆಗೊಂಡ ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ, ನಗರ ಠಾಣಾ ಎಸ್ಸೈ ಶೇಷಪ್ಪಪಿ., ಹೆಡ್ ಕಾನ್‌ಸ್ಟೇಬಲ್‌ಗಳಾದ ಹರೀಶ್ ಭಟ್, ವಾಸು, ಉಮೇಶ್, ಕಾನ್‌ಸ್ಟೇಬಲ್‌ಗಳಾದ ನವೀನ್, ಸೀತಾರಾಮ, ಧರ್ಮಪಾಲರನ್ನು ಬಿ.ಸಿ.ರೋಡಿನಲ್ಲಿ ಸನ್ಮಾನಿಸಲಾಯಿತು. ಎಎಸ್ಪಿರಾಹುಲ್ ಕುಮಾರ್, ಸಿಐ ಬೆಳ್ಳಿಯಪ್ಪ, ತಹಶೀಲ್ದಾರ್ ಪುರಂದರ ಹೆಗ್ಡೆ, ನಗರ ಠಾಣಾ ಎಸ್ಸೈ ನಂದಕುಮಾರ್ ಶುಭ ಹಾರೈಸಿದರು. ಎಎಸ್ಸೈ ಸೇಸಮ್ಮ ಸ್ವಾಗತಿಸಿದರು ಸಿಬ್ಬಂದಿ ಕರೀಂ ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.