ರಾಜ್ಯಮಟ್ಟದ ರೋವರ್ಸ್ ಜಲಸಾಹಸ ಶಿಬಿರ ಸಮಾರೋಪ
ಸುಳ್ಯ, ಜ.12: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮತ್ತು ತಾಲೂಕು ಘಟಕ ಹಾಗೂ ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜುಗಳ ಸಹಯೋಗದೊಂದಿಗೆ ಸುಳ್ಯದ ಕೆವಿಜಿ ಆಯುರ್ವೇದಿಕ್ ಕಾಲೇಜಿನ ಸಭಾಂಗಣದಲ್ಲಿ ನಡೆ ರಾಜ್ಯ ಮಟ್ಟದ ರೋವರ್ಸ್ ಜಲ ಸಾಹಸ ಶಿಬಿರ ಸಂಪನ್ನಗೊಂಡಿದೆ.
ಸಮಾರೋಪ ಭಾಷಣ ಮಾಡಿದ ಸ್ಕೌಟ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ, ರಾಷ್ಟ್ರೀಯ ಮಟ್ಟದ ಜಂಬೂರಿ ಈ ವರ್ಷ ಮೈಸೂರಿನಲ್ಲಿ ನಡೆಯಲಿದ್ದು, ಸುಮಾರು 30 ಸಾವಿರ ಮಕ್ಕಳು ಇದರಲ್ಲಿ ಭಾಗವಹಿಸಲಿದ್ದಾರೆ. ರಾಜ್ಯಮಟ್ಟದ ಜಂಬೂರಿ ಮಂಗಳೂರಿನಲ್ಲಿ ಅಕ್ಟೋಬರ್‌ನಲ್ಲಿ ನಡೆಸಲಾಗುವುದು ಎಂದರು.
ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎನ್.ಜಿ.ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಕಾಡಮಿ ಆಫ್ ಲಿಬರಲ್ ಎಜುಕೇಶನ್‌ನ ಖಜಾಂಚಿ ಶೋಭಾ ಚಿದಾನಂದ ಭಾಗವಹಿಸಿದ್ದರು. ಜಿಲ್ಲಾ ಸ್ಕೌಟ್ಸ್ ಆಯುಕ್ತ ರಾಮಶೇಷ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಕದ್ರಿ, ಕೋಶಾಧಿಕಾರಿ ವಾಸುದೇವ ಬೋಳಾರ್, ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ಮೇಜರ್ ಗಿರಿಧರ ಗೌಡ, ಕೆವಿಜಿ ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಸ್.ಶೆಟ್ಟರ್, ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಜಗದೀಶ ಅಡ್ತಲೆ, ನಿವೃತ್ತ ಶಿಕ್ಷಕಿ ಕಲಾವತಿ ವಿ. ಶೆಟ್ಟಿ, ಪಂಜ ಘಟಕದ ಅಧ್ಯಕ್ಷ ವಾಸುದೇವ ನಡ್ಕ, ಸುಳ್ಯ ಘಟಕದ ಕೋಶಾಧಿಕಾರಿ ಅಬೂಬಕರ್ ವೇದಿಕೆಯಲ್ಲಿದ್ದರು. ಭಾರತ್ ಸ್ಕೌಟ್ಸ್ ಗೈಡ್ಸ್ ಸುಳ್ಯ ಘಟಕದ ಅಧ್ಯಕ್ಷ ಎಸ್.ಎಂ.ಬಾಪೂ ಸಾಹೇಬ್ ಸ್ವಾಗತಿಸಿದರು. ಪ್ರಭಾಕರ ಭಟ್ ವಂದಿಸಿದರು.