×
Ad

ಜ.26ರಂದು ಗುಜರಾತಿನಲ್ಲಿ ಪುತ್ರಿಯರಿಗೆ ಗೌರವ ಸಲ್ಲಿಕೆ

Update: 2016-01-12 23:46 IST

ಅಹ್ಮದಾಬಾದ್,ಜ.12: ಗುಜರಾತ್‌ನಲ್ಲಿ ಈ ಬಾರಿಯ ಗಣರಾಜ್ಯೋತ್ಸವದಂದು ಪ್ರತಿ ಗ್ರಾಮದಲ್ಲಿ ಅತ್ಯಂತ ಹೆಚ್ಚು ಓದಿರುವ ಬಾಲಕಿ ಸರಕಾರಿ ಶಾಲೆಯಲ್ಲಿ ರಾಷ್ಟ್ರೀಯ ಧ್ವಜಾರೋಹಣವನ್ನು ನೆರವೇರಿಸಲಿದ್ದಾಳೆ.
ಈ ಆದೇಶವನ್ನು ಪಾಲಿಸುವಂತೆ ರಾಜ್ಯ ಸರಕಾರವು ಎಲ್ಲ ಸರಕಾರಿ ಶಾಲೆಗಳಿಗೆ ಸುತ್ತೋಲೆಯನ್ನು ರವಾನಿಸಿದೆ. ಖಾಸಗಿ ಶಾಲೆಗಳ ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿಗಳಿಗೂ ಅದು ಈ ಬಗ್ಗೆ ಮಾಹಿತಿ ನೀಡಿದೆ.
 ಇಷ್ಟೇ ಅಲ್ಲ, 2016ರಲ್ಲಿ ಜನಿಸಿರುವ ಹೆಣ್ಣುಮಕ್ಕಳ ಹೆತ್ತವರನ್ನೂ ಅದು ಸನ್ಮಾನಿಸಲಿದೆ. ಕಾರ್ಯಕ್ರಮವನ್ನು ನಡೆಸಲು ರಾಜ್ಯದಲ್ಲಿಯ ಪ್ರತಿ ಶಾಲೆಗೂ ಸರಕಾರದಿಂದ 300 ರೂ.ನೀಡಲಾಗುವುದು.
‘ಬೇಟಿ ಕೋ ಸಲಾಮ್,ದೇಶ್ ಕೆ ನಾಮ್’ಎನ್ನುವುದು ಈ ಶಾಲಾ ಕಾರ್ಯಕ್ರಮಗಳ ಧ್ಯೇಯವಾಕ್ಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News