ಎಂಸಿ ಆ್ಯಂಡ್ ಎ’ ಸಂಸ್ಥೆಯ ಲಾಂಛನ ಅನಾವರಣ
Update: 2016-01-12 23:47 IST
ಮಂಗಳೂರು, ಜ.12: ಎಂಸಿ ಆ್ಯಂಡ್ ಎ ಸಂಸ್ಥೆಯ ನೂತನ ಹೆಸರು ಮತ್ತು ಲಾಂಛನ ಅನಾವರಣ ಸಮಾರಂಭ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕೆ.ರತ್ನ ಪ್ರಭ, ಸಂಸದ ಬಿ.ವಿ. ನಾಯಕ್, ಬಂಜಾ ತಾಂಡ ಅಭಿವೃದ್ಧಿ ನಿಗಮದ ನಿಯಮಿತದ ಅಧ್ಯಕ್ಷೆ ಜಲಜಾ ನಾಯಕ್, ದೇವರಾಜ ಅರಸು ಟರ್ಮಿನಲ್‌ನ ಅಧ್ಯಕ್ಷ ಪ್ರಕಾಶಂ, ಕೆಎಸ್‌ಐಐಡಿಸಿ ಅಧ್ಯಕ್ಷ ಸಿ.ವಿ. ರಾಜಪ್ಪ, ಎಂಎಸ್‌ಐಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಜಿ.ಸಿ. ಪ್ರಕಾಶ್ ಮತ್ತು ಎಂಸಿ ಆ್ಯಂಡ್ ಎ ಅಧ್ಯಕ್ಷ ಎಲ್.ಎನ್. ಮೂರ್ತಿ, ಎನ್.ಕೆ. ರಾಮಚಂದ್ರ ರಾವ್ ಉಪಸ್ಥಿತರಿದ್ದರು.