ನಿಷೇಧವಿರಲಿ, ಇಲ್ಲದಿರಲಿ ನೀಲಿಚಿತ್ರ ವೀಕ್ಷಣೆಯಲ್ಲಿ ಭಾರತೀಯರು ಮುಂದು!
ನ್ಯೂಯಾರ್ಕ್, ಜ. 12: ಒಂದಂತೂ ಸ್ಪಷ್ಟ! ನಿಷೇಧವಿರಲಿ, ಇಲ್ಲದಿರಲಿ, ಭಾರತ ಹಿಂದೆಂದಿಗಿಂತಲೂ ಅಧಿಕ ನೀಲಿಚಿತ್ರಗಳನ್ನು ನೋಡುತ್ತಿದೆ.
2015ರಲ್ಲಿ, ಜಗತ್ತಿನ ಅತ್ಯಂತ ದೊಡ್ಡ ವಯಸ್ಕರ ವೆಬ್‌ಸೈಟ್ ‘ಪೋರ್ನ್‌ಹಬ್’ಗೆ ಹೋಗುವವರ ಪಟ್ಟಿಯಲ್ಲಿ ಕೆನಡವನ್ನು ಹಿಂದಿಕ್ಕಿ ಮೂರನೆ ಸ್ಥಾನವನ್ನು ಪಡೆದಿತ್ತು. ಅಮೆರಿಕ ಮತ್ತು ಬ್ರಿಟನ್ ಮೊದಲ ಎರಡು ಸ್ಥಾನಗಳನ್ನು ಹಂಚಿಕೊಂಡಿದ್ದವು.
ಜಗತ್ತಿನಾದ್ಯಂತದ ಜನರು ನೀಲಿಚಿತ್ರವನ್ನು ಹೇಗೆ ವೀಕ್ಷಿಸುತ್ತಾರೆ ಎಂಬ ಕುರಿತು ಪೋರ್ನ್‌ಹಬ್ ವಾರ್ಷಿಕ ಸಮೀಕ್ಷೆಯೊಂದನ್ನು ನಡೆಸಿದೆ. ನೀಲಿಚಿತ್ರಗಳನ್ನು ವೀಕ್ಷಿಸುವ ಸರಾಸರಿ ಅವಧಿಗೆ ಅಮೆರಿಕ ಈ ಬಾರಿ 11 ಸೆಕೆಂಡ್‌ಗಳನ್ನು ಸೇರಿಸಿದೆ. ವೆಬ್‌ಸೈಟ್‌ಗೆ ಭೇಟಿ ಕೊಡುವ ಸರಾಸರಿ ಅವಧಿಗೆ ಭಾರತ ಈ ಭಾರಿ ಒಂದು ನಿಮಿಷವನ್ನು ಸೇರಿಸಿದೆ. ಅಂದರೆ, ಭಾರತೀಯರು ಪ್ರತಿ ಭಾರಿ ಈ ವೆಬ್‌ಸೈಟ್‌ಗೆ ಹೋದಾಗಲೂ ಸರಾಸರಿ ಒಂಬತ್ತೂವರೆ ನಿಮಿಷಗಳನ್ನು ಕಳೆಯುತ್ತಾರೆ.
‘‘ನಮ್ಮ ಗ್ರಾಹಕರು ವೆಬ್‌ಸೈಟ್‌ಗೆ ಭೇಟಿ ನೀಡುವಾಗ ಹೆಚ್ಚೆಚ್ಚು ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳನ್ನು ಬಳಸುತ್ತಾರೆ’’ ಎಂದು ಪೋರ್ನ್‌ಹಬ್ ಹೇಳಿದೆ.
2015ರಲ್ಲಿ ಪೋರ್ನ್‌ಹಬ್‌ನಲ್ಲಿ 2,120 ಕೋಟಿ ಭೇಟಿ ದಾಖಲಾಗಿದೆ. ಅಂದರೆ ಪ್ರತಿ ನಿಮಿಷಕ್ಕೆ 40,000 ಭೇಟಿ ಹಾಗೂ ಪ್ರತಿ ಗಂಟೆಗೆ 24 ಲಕ್ಷ ಭೇಟಿ.
‘‘ಭಾರತದಲ್ಲಿ ಜನರು ಹೆಚ್ಚಾಗಿ ಬಾಲಿವುಡ್ ನಟಿ ಸನ್ನಿ ಲಿಯೋನ್‌ರ ನೀಲಿಚಿತ್ರಗಳಿಗಾಗಿ ಹುಡಕಾಡುತ್ತಾರೆ’’ ಎಂದು ಅದು ಹೇಳಿದೆ.