×
Ad

ಗೂಡಿನಬಳಿ: ಮೀಲಾದ್ ಸಮಾವೇಶ

Update: 2016-01-12 23:51 IST


ಬಂಟ್ವಾಳ, ಜ.12: ಮಸ್ಜಿದ್ ಎ ಮುತ್ತಲಿಬ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಯಾತುಲ್ ಇಸ್ಲಾಂ ಮದ್ರಸ ಗೂಡಿನಬಳಿ ವತಿಯಿಂದ ಜಿ.ಮುಹಮ್ಮದ್ ಹಾಜಿಯ ಅಧ್ಯಕ್ಷತೆಯಲ್ಲಿ ಮೀಲಾದ್ ಸಮಾವೇಶ -ಪ್ರತಿಭಾ ಪುರಸ್ಕಾರ ಜರಗಿತು. ಮುಖ್ಯ ಅಧ್ಯಾಪಕ ಅಬ್ದುರ್ರಝಾಕ್ ಅಲ್ ಅಝ್ಹರಿ ಕಾರ್ಯಕ್ರಮ ಉದ್ಘಾಟಿಸಿದರು. ಅಬೂಬಕರ್ ರಿಯಾಝ್ ರಹ್ಮಾನಿ ಖತೀಬ್ ಗೂಡಿನಬಳಿ ಮುಖ್ಯ ಭಾಷಣ ಮಾಡಿದರು.
   ಮದ್ರಸ ವಿದ್ಯಾರ್ಥಿಗಳಿಂದ ತಾಜ್‌ದಾರೆ ಮದೀನಾ, ತಸ್ನೀಮೇ ಇಸ್ಕ್, ಜಶ್ನೇ ಅಹ್ಮದ್, ಇಶ್ಕೇ ಮದೀನಾ ಎಂಬ 4 ಬುರ್ದಾ ತಂಡಗಳಿಂದ ಬುರ್ದಾ ಮಜ್ಲಿಸ್ ಮತ್ತು ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ಕಳೆದ ಸಾಲಿನ ಸಮಸ್ತ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಇಹ್‌ತಿಶಾಂ ರಾಫಿ ಮತ್ತು ಯಶಸ್ವಿಗೆ ಕಾರಣರಾದ ಮದ್ರಸ ಅಧ್ಯಾಪಕ ವೃಂದದವರನ್ನು ಜಮಾಅತ್ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು. ಸಮಸ್ತ ಸುನ್ನಿ ಬಾಲ ವೇದಿಯಿಂದ ಹೊರತಂದ ‘ಅಲ್ ಮುತ್ತಲಿಬ್’ ಮೀಲಾದ್ ವಿಶೇಷ ಪುರವಣಿ ಬಿಡುಗಡೆಗೊಳಿಸಲಾಯಿತು. ವೇದಿಕೆಯಲ್ಲಿ ಮಾಜಿ ಖತೀಬ್ ಅಲ್ ಹಾಜಿ ಝುಬೈರ್ ಮಝಾಹಿರ್, ಮದ್ರಸ ಮುಅಲ್ಲಿಂ ಇಸ್ಮಾಯೀಲ್ ಮುಸ್ಲಿಯಾರ್, ಜಮಾಅತ್ ಕಮಿಟಿ ಕಾರ್ಯದರ್ಶಿ ಜಿ.ಎ.ಅಬ್ದುಲ್ ಖಾದರ್, ಉಪಾಧ್ಯಕ್ಷ ಜಿ.ಕರೀಂ, ಜೊತೆ ಕಾರ್ಯದರ್ಶಿ ಜಿ.ಉಬೈದುಲ್ಲಾ, ಹಯಾತುಲ್ ಇಸ್ಲಾಮ್ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಮಾಚಾರ್, ಬಂಟ್ವಾಳ ಪುರಸಭೆ ಸದಸ್ಯರಾದ ಐ.ಎಂ.ಆರ್ ಇಕ್ಬಾಲ್, ಗೂಡಿನಬಳಿ ಶಾಲಾ ಸಂಚಾಲಕ ಹಾಜಿ ಬಾವ, ಜಮಾಅತ್ ಕಮಿಟಿ ಸದಸ್ಯರಾದ ರಶೀದ್ ಜಿ.ಕೆ., ಹಕೀಮ್ ಗೂಡಿನಬಳಿ, ಅಶ್ರಫ್ ಜಿ.ಕೆ., ಲತೀಫ್ ಖಾನ್, ಹಸನ್ ಗೂಡಿನಬಳಿ, ಖಾದರ್, ಮೋನಾಕ ಜಿ.ಕೆ., ರಝಾಕ್ ಟಿ., ಬಶೀರ್, ಹನೀಫ್, ಜಿ.ಎಸ್.ಅನ್ವರ್ ಉಪಸ್ಥಿತರಿದ್ದರು. ಮುನೀರ್ ಅಝ್ಹರಿ ಸ್ವಾಗತಿಸಿದರು. ಸಿ.ಎಂ.ಇಬ್ರಾಹೀಂ ಕೌಸರಿ ಮುಂಡೋಳೆ ಕಾರ್ಯಕ್ರಮ ನಿರೂಪಿಸಿದರು. ಅಶ್ರಫ್ ಅಝ್ಹರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News