ತಂಡಗಳ ನಡುವೆ ಗುಂಡು ಹಾರಾಟ ಪ್ರಕರಣ; ಉಪ್ಪಳದಲ್ಲಿ ಫಾರೆನ್ಸಿಕ್ ತಜ್ಞರಿಂದ ಪರಿಶೀಲನೆ

Update: 2016-01-12 18:23 GMT

ಮಂಜೇಶ್ವರ, ಜ.12: ಉಪ್ಪಳ ಪೇಟೆಯಲ್ಲಿ ಇತ್ತೀಚೆಗೆ ನಡೆದ ಗೂಂಡಾ ತಂಡಗಳ ನಡುವಿನ ಪರಸ್ಪರ ಗುಂಡು ಹಾರಾಟ ಪ್ರಕರಣಕ್ಕೆ ಸಂಬಂಧಿಸಿ ವಶಪಡಿಸಿಕೊಳ್ಳಲಾದ ವಾಹನಗಳನ್ನು ಮಂಗಳವಾರ ಉನ್ನತ ಮಟ್ಟದ ಫಾರೆನ್ಸಿಕ್ ತಜ್ಞರು ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದರು.

ಇತ್ತೀಚೆಗೆ ಉಪ್ಪಳದಲ್ಲಿ ಕಸಾಯಿ ಅಲಿ ಹಾಗೂ ಖಾಲಿಯಾ ರಫೀಕ್ ತಂಡಗಳ ನಡುವೆ ಪರಸ್ಪರ ಗುಂಡು ಹಾರಾಟ ನಡೆದಿತ್ತು. ಈ ವೇಳೆ ಆರೋಪಿಗಳು ಬಿಟ್ಟುಹೋದ ವೇಗನರ್ ಹಾಗೂ ಬೊಲೇರೋ ಕಾರುಗಳನ್ನು ಪೋಲೀಸರು ವಶಪಡಿಸಿ, ಕಸಾಯಿ ಅಲಿ ಮತ್ತು ಖಾಲಿಯಾ ರಫೀಕ್‌ನನ್ನು ಬಂಧಿಸಿದ್ದರು. ಹಲವು ಪ್ರಕರಣದ ಆರೋಪಿ ಖಾಲಿಯಾ ರಫೀಕ್‌ನ ವಿರುದ್ಧ ಪೊಲೀಸರು ಕಾಫಾ ಕಾಯ್ದೆ ಜಾರಿಗೊಳಿಸಿದ್ದಾರೆ.

ಮಂಗಳವಾರ ಫಾರೆನ್ಸಿಕ್ ತಜ್ಞರಾದ ದೀಪೇಶ್ ಹಾಗೂ ಶ್ರೀಜಾ ಕೆ.ಪಿ. ವಶಪಡಿಸಿದ ಎರಡೂ ವಾಹನಗಳನ್ನು ತಪಾಸಣೆ ನಡೆಸಿ ಮಾಹಿತಿ ಕಲೆ ಹಾಕಿದರು. ಕುಂಬಳೆ ಸಿ.ಐ. ಸುರೇಶ್ ಬಾಬು, ಮಂಜೇಶ್ವರ ಎಸ್ಸೈ ಪ್ರಮೋದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News