ಬೀಡಿ ಕಾರ್ಮಿಕರಿಂದ ಅರ್ಜಿ ಸಲ್ಲಿಸುವ ಕಾರ್ಯಕ್ರಮ
Update: 2016-01-13 00:03 IST
ಉಳ್ಳಾಲ, ಜ.12: ತೊಕ್ಕೊಟ್ಟುವಿನ ಸಿಐಟಿಯು ಕೋಟೆಕಾರ್ ಸರ್ಕಲ್ ಬೀಡಿ ಲೇಬರ್ ಯೂನಿಯನ್ ವತಿಯಿಂದ ‘ಬೀಡಿ ಕೈಗಾರಿಕೆ ಮುಚ್ಚಲ್ಪಟ್ಟರೆ ಬದಲಿ ಪರಿಹಾರ ಒದಗಿಸಲು ಆಗ್ರಹಿಸಿ‘ಮುನ್ನೂರು ಪಂಚಾಯತ್‌ನಲ್ಲಿ ಅರ್ಜಿ ಸಲ್ಲಿಸುವ ಕಾರ್ಯಕ್ರಮ ಮಂಗಳವಾರ ನಡೆಯಿತು.
ಸಿಐಟಿಯು ಉಳ್ಳಾಲ ವಲಯದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪಸಾಲಿಯಾನ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಬೀಡಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭ ಸಿಐಟಿಯು ಕೋಟೆಕಾರ್ ಸರ್ಕಲ್ ಬೀಡಿ ಲೇಬರ್ ಯೂನಿಯನ್‌ನ ಅಧ್ಯಕ್ಷೆ ಪದ್ಮಾವತಿ ಎಸ್ ಶೆಟ್ಟಿ, ಕಾರ್ಯದರ್ಶಿ ಜಯಂತ್ ನಾಯಕ್, ಉಪಾಧ್ಯಕ್ಷ ಜನಾರ್ದನ ಕುತ್ತಾರ್, ಜನವಾದಿ ಮಹಿಳಾ ಸಂಘದ ಅಧ್ಯಕ್ಷೆ ನಳಿನಾಕ್ಷಿ, ಸುಂದರ ಕುಂಪಲ, ನಾರಾಯಣ ತಲಪಾಡಿ, ಸೋಮೇಶ್ವರ ಗ್ರಾಪಂ ಮಾಜಿ ಸದಸ್ಯೆ ಪುಷ್ಪಾ ಉಪಸ್ಥಿತರಿದ್ದರು.