ನೀರಿಗೆ ಬಿದ್ದು ಮೀನುಗಾರ ಮೃತ್ಯು
Update: 2016-01-13 00:04 IST
ಕೋಟ, ಜ.12: ಸೋಮವಾರ ರಾತ್ರಿ ಮೀನುಗಾರಿಕಾ ಕೆಲಸಕ್ಕಾಗಿ ಹಂಗಾರಕಟ್ಟೆ ಮೀನುಗಾರಿಕಾ ಬಂದರಿನಲ್ಲಿ ಬೋಟ್ ಹತ್ತುವಾಗ ಆಯತಪ್ಪಿ ಕಾಲು ಜಾರಿ ನೀರಿಗೆ ಬಿದ್ದು ಕಾಣೆಯಾದ ಮೀನುಗಾರ ಮಣೂರು ಪಡುಕೆರೆ ಗ್ರಾಮದ ಕೃಷ್ಣ ಪೂಜಾರಿ (45) ಎಂಬವರ ಮೃತದೇಹ ಮಂಗಳವಾರ ಬೆಳಗ್ಗೆ 6ಗಂಟೆಗೆ ಪತ್ತೆ ಯಾಗಿದೆ. ಪಾರಂಪಳ್ಳಿ ಗ್ರಾಮದ ಕೃಷ್ಣ ಕುಂದರ್‌ಅವರ ಭಾಗ್ಯಲಕ್ಷ್ಮೀ ಬೋಟ್‌ನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಕೃಷ್ಣ ಸೋಮವಾರ ರಾತ್ರಿ ಬೋಟ್ ಹತ್ತುವಾಗ ಆಯತಪ್ಪಿ ಕಾಲು ಜಾರಿ ನೀರಿಗೆ ಬಿದ್ದು ಕಾಣೆಯಾಗಿದ್ದರು. ಮಂಗಳವಾರ ಬೆಳಗ್ಗೆ ಬೋಟ್‌ನ ಹಗ್ಗದಲ್ಲಿ ಸಿಕ್ಕಿಹಾಕಿಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.