×
Ad

ಅಕ್ರಮ ಕಸಾಯಿಖಾನೆಗೆ ದಾಳಿ

Update: 2016-01-13 00:05 IST

ಬೆಳ್ತಂಗಡಿ, ಜ.12: ಬಂಟ್ವಾಳ ತಾಲೂಕು ತೆಂಕಕಜೆಕಾರು ಗ್ರಾಮದ ನಿವಾಸಿ ಅಬ್ದುಲ್ ಅಝೀಝ್ ಎಂಬವರ ತೋಟದಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಪೂಂಜಾಲಕಟ್ಟೆ ಪೊಲೀಸರು ದನದ ಮಾಂಸ ವಶಪಡಿಸಿಕೊಂಡು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅಬ್ದುಲ್ ಅಝೀಝ್, ಮುಸ್ತಫಾ, ಅಬ್ದುಲ್ ಕುಂಞಿ, ನಾಸಿರ್, ಫಾರೂಕ್ ಎಂದು ಗುರುತಿಸಲಾಗಿದೆ. ತೋಟದ ನಡುವೆ ಅಕ್ರಮವಾಗಿ ದನದ ಮಾಂಸ ತಯಾರಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸೋಮವಾರ ರಾತ್ರಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 5 ಸಾವಿರ ರೂ. ನಗದು ಹಾಗೂ 50 ಕೆ.ಜಿ. ದನದ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News