×
Ad

ಬೆಂಕಿ ಆಕಸ್ಮಿಕ; ಮೃತ್ಯು

Update: 2016-01-13 00:10 IST

ಉಡುಪಿ, ಜ.12: ಕಳೆದ ರವಿವಾರ ಸಂಜೆ ಅಡುಗೆ ಮಾಡುವ ವೇಳೆ ಸೀಮೆಎಣ್ಣೆ ಸ್ಟವ್‌ಗೆ ಗಾಳಿ ಹಾಕಿ ಬೆಂಕಿ ಹಚ್ಚಿದಾಗ ಆಕಸ್ಮಿಕವಾಗಿ ಬೆಂಕಿ ತಗಲಿ ಸುಟ್ಟಗಾಯಗಳಿಂದ ಮಣಿಪಾಲ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾದ ನಾಗವಲ್ಲಿ (50) ಎಂಬವರು ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ಮೃತಪಟ್ಟಿದ್ದಾರೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News