×
Ad

ನಗದು ಕಳವು

Update: 2016-01-13 00:11 IST

 ಕುಂದಾಪುರ, ಜ.12: ಇಲ್ಲಿನ ಅಂಗಡಿಯೊಂದಕ್ಕೆ ಗ್ರಾಹಕರಂತೆ ಬಂದ ಮೂವರು ಅಪರಿಚಿತರು, ಅಂಗಡಿಯ ಮಾಲಕಿಯನ್ನು ವಂಚಿಸಿ ಟೇಬಲ್ ಮೇಲೆ ಇರಿಸಿದ್ದ 75,000ರೂ.ನಗದನ್ನು ಕಳವು ಮಾಡಿದ ಘಟನೆ ವರದಿಯಾಗಿದೆ. ಇಲ್ಲಿನ ನಾಗೇಶ್ವರ ಹಾರ್ಡ್‌ವೇರ್ ಅಂಗಡಿಗೆ ನಿನ್ನೆ ಸಂಜೆ 4:15 ಗಂಟೆಗೆ ಬಂದ ಮೂವರಲ್ಲಿ ಒಬ್ಬಾತ ಟಾಟಾಶೀಟ್‌ನ್ನು ಖರೀದಿಸುವ ನೆಪದಲ್ಲಿ ಶೀಟನ್ನು ಪರಿಶೀಲಿಸುವ ನೆಪದಲ್ಲಿ ಗಮನ ಬೇರೆ ಕಡೆ ಸೆಳೆದಾಗ ಉಳಿದಿಬ್ಬರು ಮೇಜಿನ ಮೇಲಿರಿಸಿದ್ದ ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News