ಟ್ರಾಫಿಕ್ ಸೇವಕನಿಗೆ ಸನ್ಮಾನ
Update: 2016-01-13 00:12 IST
ಬಂಟ್ವಾಳ, ಜ. 12: ಪುರಸಭೆಯ ಬಿ.ಮೂಡ ಗ್ರಾಮದ ಕೈಕಂಬ ಪೇಟೆ ಜಾಗ ಮತ್ತು ಕೈಕಂಬದಿಂದ ಮೊಡಂಕಾಪು ಪೇಟೆಯವರೆಗೆ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗಳ ಕಾರ್ಯಕ್ರಮದಲ್ಲಿ ಬಿ.ಸಿ.ರೋಡ್ ಕೈಕಂಬದಲ್ಲಿ ಉಚಿತ ಟ್ರಾಫಿಕ್ ಸೇವೆ ನೀಡುವ ಸುಗಮ ಸಂಚಾರದ ರೂವಾರಿ ಡಿ.ಎ.ರಹ್ಮಾನ್ ಪಟೇಲ್‌ರನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸನ್ಮಾನಿಸಿದರು. ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ, ಬೂಡಾ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಪುರಸಭಾ ಸದಸ್ಯರಾದ ಸದಾಶಿವ ಬಂಗೇರ, ಮುಹಮ್ಮದ್ ನಂದರಬೆಟ್ಟು, ರಾಮಕೃಷ್ಣ ಆಳ್ವ ಮತ್ತಿತರರು ಉಪಸ್ಥಿತರಿದ್ದರು.